ಟ್ವಿಟರಿಗರ ಮಾತಿಗೆ ಮನನೊಂದ ಸಚಿವೆ ಸುಷ್ಮಾ ಸ್ವರಾಜ್ ಪತಿ

ಸೋಮವಾರ, 2 ಜುಲೈ 2018 (10:05 IST)
ನವದೆಹಲಿ: ಇತ್ತೀಚೆಗಷ್ಟೇ ಅಂತರ್ ಧರ್ಮೀಯ ದಂಪತಿಗೆ ಪಾಸ್ ಪೋರ್ಟ್ ಕೊಡಿಸುವ ವಿಚಾರದಲ್ಲಿ ಟ್ರೋಲ್ ಗೆ ಒಳಗಾಗಿದ್ದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅದರ  ಬಗ್ಗೆ ಒಂದು ಸಮೀಕ್ಷೆಯನ್ನೇ ನಡೆಸಿದ್ದರು.

ತಮ್ಮನ್ನು ಟ್ರೋಲ್ ಮಾಡಿರುವುದು ಸರಿಯೇ ಎಂದು ಸುಷ್ಮಾ ಸಮೀಕ್ಷೆ ನಡೆಸಿದ್ದಕ್ಕೆ ಶೇ.57 ರಷ್ಟು ಮಂದಿ ಸುಷ್ಮಾ ಪರ ನಿಂತಿದ್ದರು. ಆದರೆ ಸುಷ್ಮಾ ಬಗ್ಗೆ ಕೆಟ್ಟದಾಗಿ ಟ್ವೀಟ್ ಮಾಡಿ ಕೆಲವರು ಅವರ ಪತಿ ಸ್ವರಾಜ್ ಕೌಶಲ್ ಗೆ ಟ್ಯಾಗ್ ಮಾಡಿದ್ದರು.

ಇದರಿಂದ ಮನನೊಂದ ಸ್ವರಾಜ್ ಕೌಶಲ್, ಭಾವುಕರಾಗಿ ಟ್ವೀಟ್ ಮಾಡಿದ್ದಾರೆ. ಮುಕೇಶ್ ಗುಪ್ತಾ ಎಂಬಾತ ‘ಇಂದು ರಾತ್ರಿ ನಿಮ್ಮ ಪತ್ನಿ ಮನೆಗೆ ಬಂದಾಗ ಕೆನ್ನೆಗೆ ಬಾರಿಸಿ ಮುಸ್ಲಿಮರ ಓಲೈಕೆ ಮಾಡಬೇಡ ಎಂದು ನೀವು ಹೇಳಬಾರದೇಕೆ?’ ಎಂದು ಟ್ವೀಟ್ ಮಾಡಿದ್ದ.

ಇದರಿಂದ ನೊಂದ ಸ್ವರಾಜ್ ಕೌಶಲ್ ‘ನೀವು ಬಳಸಿರುವ ಪದಗಳಿಂದ ಸಹಿಸಲಾಗದ ನೋವಾಗಿದೆ. 1993 ರಲ್ಲಿ ನನ್ನ ಅಮ್ಮ ಕ್ಯಾನ್ಸರ್ ನಿಂದ ತೀರಿಕೊಂಡರು. ಆಗ ಸುಷ್ಮಾ, ಸಂಸದೆ, ಮಾಜಿ ಸಚಿವೆ. ಹಾಗಿದ್ದರೂ ಒಂದು ವರ್ಷ ಕಾಲ ನನ್ನ ಅಮ್ಮನ ಜತೆ ಆಸ್ಪತ್ರೆಯಲ್ಲಿದ್ದು, ಆಕೆಯ ಆರೈಕೆ ಮಾಡಿದ್ದಳು. ನಾವೆಲ್ಲರೂ ಸುಷ್ಮಾ ಬಗ್ಗೆ ಗೌರವ ಹೊಂದಿದ್ದೇವೆ. ಅವರ ವಿರುದ್ಧ ಇಂಥಾ ಪದ ಬಳಸಬೇಡಿ’ ಎಂದು ಭಾವುಕರಾಗಿ ಬರೆದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ