ಟ್ರೋಲ್ ಮಾಡಿದವರಿಗೆ ಥ್ಯಾಂಕ್ಯೂ ಹೇಳಿದ ಸಚಿವೆ ಸುಷ್ಮಾ ಸ್ವರಾಜ್
ಸೋಮವಾರ, 25 ಜೂನ್ 2018 (09:33 IST)
ನವದೆಹಲಿ: ಅಂತರ್ ಧರ್ಮೀಯ ದಂಪತಿಗೆ ಪಾಸ್ ಪೋರ್ಟ್ ನೀಡುವ ವಿಚಾರದಲ್ಲಿ ಸಹಾಯ ಮಾಡಲು ಹೋಗಿ ಟ್ವಿಟರ್ ನಲ್ಲಿ ಟ್ರೋಲ್ ಗೊಳಗಾದ ಸಚಿವೆ ಸುಷ್ಮಾ ಸ್ವರಾಜ್ ಟ್ರೋಲಿಗರಿಗೆ ತಿರುಗೇಟು ಕೊಟ್ಟಿದ್ದಾರೆ.
ದಂಪತಿಗೆ ಪಾಸ್ ಪೋರ್ಟ್ ನೀಡುವ ವಿಚಾರದಲ್ಲಿ ಕಿರಿಕ್ ಮಾಡಿದ ಅಧಿಕಾರಿಗೆ ಪಾಠ ಹೇಳಿ, ವಿವಾದ ಬಗೆ ಹರಿಸಿದ ವಿಚಾರವನ್ನು ಸುಷ್ಮಾ ಟ್ವಿಟರ್ ನಲ್ಲಿ ಹಾಕಿದ್ದರು. ಇದಕ್ಕೆ ಕೆಲವರು ಸುಷ್ಮಾ ಮುಸ್ಲಿಮರ ಪರ ನಿಂತಿದ್ದಕ್ಕೆ ನಾಚಿಕೆಯಾಗಲ್ವಾ? ಕಾಂಗ್ರೆಸ್ ಸೇರುವ ಸಾಧ್ಯತೆಯಿದೆ ಎಂದು ಟ್ವಿಟರಿಗರು ಟ್ರೋಲ್ ಮಾಡಿದ್ದರು.
ಇವರಿಗೆ ಪ್ರತಿಕ್ರಿಯಿಸಿರುವ ಸಚಿವೆ ಸುಷ್ಮಾ, ಕೆಲವರ ಟ್ವೀಟ್ ನಿಂದ ದೊಡ್ಡ ಗೌರವವೇ ಸಿಕ್ಕಿದೆ ಎಂದಿದ್ದಾರೆ. ನಾನು ಕೆಲವು ದಿನಗಳವರೆಗೆ ದೇಶದಲ್ಲಿರಲಿಲ್ಲ. ಆ ಸಂದರ್ಭದಲ್ಲಿ ಏನಾಯಿತು ನನಗೆ ಗೊತ್ತಿಲ್ಲ. ಕೆಲವರ ಟ್ವೀಟ್ ನಿಂದ ಗೌರವ ಹೆಚ್ಚಿಸಿಕೊಂಡಿದ್ದೇನೆ. ಅದನ್ನು ನಾನು ನಿಮ್ಮೊಂದಿಗೆ ಶೇರ್ ಮಾಡಿದ್ದೇನೆ. ಅದನ್ನು ನಾನು ಇಷ್ಟಪಟ್ಟಿದ್ದೇನೆ’ ಎಂದು ಸುಷ್ಮಾ ಮೃದುವಾಗಿಯೇ ತಿರುಗೇಟು ಕೊಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.