ರಾಹುಲ್ ಗಾಂಧಿ ಟ್ವೀಟ್ ರಿಟ್ವೀಟ್ ಮಾಡಿದ ವಿಜಯ್ ಮಲ್ಯ! ಇದುವೇ ಬಿಜೆಪಿಗೆ ಈಗ ಅಸ್ತ್ರ

ಭಾನುವಾರ, 1 ಜುಲೈ 2018 (10:55 IST)
ನವದೆಹಲಿ: ಸಾಲ ಮಾಡಿ ಬ್ರಿಟನ್ ನಲ್ಲಿ ತಲೆಮರೆಸಿಕೊಂಡಿರುವ ಮದ್ಯ ದೊರೆ ವಿಜಯ್ ಮಲ್ಯ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಟ್ವೀಟ್ ಒಂದನ್ನು ರಿಟ್ವೀಟ್ ಮಾಡಿರುವುದು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.

ಆಗಾಗ ಮಲ್ಯ ತಲೆಮರೆಸಿಕೊಂಡು ಓಡಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ದೂಷಿಸುವ ರಾಹುಲ್ ಗಾಂಧಿಗೆ ಇದೇ ವಿಚಾರವಾಗಿ ಬಿಜೆಪಿ ಕಾಲೆಳೆದಿದೆ.

ಪ್ರಧಾನಿ ಮೋದಿಯವರು ಕಪ್ಪು ಹಣ ತರುವುದಾಗಿ ಹೇಳಿದ್ದು ದೊಡ್ಡ ಮೋಸ ಎಂದು ರಾಹುಲ್ ಮಾಡಿದ ಟ್ವೀಟ್ ನ್ನು ಮಲ್ಯ ರಿಟ್ವೀಟ್ ಮಾಡಿದ್ದಾರೆ. ಇದನ್ನು ನೋಡಿ ಬಿಜೆಪಿ ಇದುವೇ ಕಾಂಗ್ರೆಸ್ ಮತ್ತು ಮದ್ಯ ದೊರೆ ಮಲ್ಯಗೆ ಇರುವ ಸಂಬಂಧ ಎಂತಹದ್ದು ಎಂದು ತೋರಿಸುತ್ತದೆ ಎಂದು ವ್ಯಂಗ್ಯವಾಡಿದೆ.

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೇ ವಿಜಯ್ ಮಲ್ಯ ಸಾವಿರಾರು ಕೋಟಿ ರೂ. ಸಾಲ ಮಾಡಿದ್ದರು. ಕಾಂಗ್ರೆಸ್ ಜತೆಗೆ ಉತ್ತಮ ಬಾಂಧವ್ಯ ಇದ್ದ ಕಾರಣಕ್ಕೇ ಇದು ಸಾಧ್ಯವಾಗಿತ್ತು. ಅದೀಗ ಸಾಬೀತಾಗಿದೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಆರೋಪಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ