ಅ.ಪ್ರ ನೂತನ ಮುಖ್ಯಮಂತ್ರಿಯಾಗುತ್ತಾರಾ ಶ್ರೀಮಂತ ಶಾಸಕ ತಕಮ್ ಪಾರಿಯೋ

ಶುಕ್ರವಾರ, 30 ಡಿಸೆಂಬರ್ 2016 (14:33 IST)
ಅರುಣಾಚಲಪ್ರದೇಶದ ಮುಖ್ಯಮಂತ್ರಿಯಾಗಿದ್ದ ಪೇಮಾ ಖಂಡು ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ವಜಾಗೊಳಿಸಲಾಗಿದ್ದು  ಶ್ರೀಮಂತ ಶಾಸಕ ತಕಮ್ ಪಾರಿಯೋ ಅವರ ಸ್ಥಾನವನ್ನಲಂಕರಿಸುವ ಸಾಧ್ಯತೆಗಳಿವೆ. ಪಿಪಿಎ (ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲಪ್ರದೇಶ್) ಪಕ್ಷದ ಅಧ್ಯಕ್ಷ ಖಫಾ ಬೆಂಗಿಯಾ ಇದನ್ನು ದೃಢೀಕರಿಸಿದ್ದಾರೆ.
 
ಗಮನಾರ್ಹ ಸಂಗತಿ ಎಂದರೆ, ತಕಮ್ ಪಾರಿಯೋ ರಾಜ್ಯದ ಅತಿ ಶ್ರೀಮಂತ ಶಾಸಕರಾಗಿದ್ದು 187ಕೋಟಿ ಆಸ್ತಿಯನ್ನು ಘೋಷಿಸಿದ್ದಾರೆ. ಅವರನ್ನು ವಿಧಾನಸಭೆ ನಾಯಕ ಮತ್ತು ಮುಖ್ಯಮಂತ್ರಿಯನ್ನಾಗಿ ಘೋಷಿಸಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ. 
 
ಪಕ್ಷ ಶಿಸ್ತು ಉಲ್ಲಂಘಿಸಿದ ಆರೋಪದ ಮೇಲೆ ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೇಮಾ ಖಂಡು ಸೇರಿದಂತೆ 7 ಮಂದಿ ಶಾಸಕರನ್ನು ಪಿಪಿಎ (ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲಪ್ರದೇಶ್) ಪಕ್ಷದಿಂದ ಗುರುವಾರ ಸಂಜೆ ಅಮಾನತುಗೊಳಿಸಲಾಗಿತ್ತು.
 
ಕಾಂಗ್ರೆಸ್ ಪಕ್ಷದಿಂದ ಬಂಡಾವೆದ್ದಿದ್ದ ಪೇಮಾ ಮತ್ತು ಇತರ 42 ಶಾಸಕರು ಸೆಪ್ಟೆಂಬರ್ ಮಧ್ಯದಲ್ಲಿ ಪಿಪಿಎ ಪಕ್ಷವನ್ನು ಆಲಂಗಿಸಿಕೊಂಡಿದ್ದರು. 
 
ಪಿಪಿಎ ಅಧ್ಯಕ್ಷ ಖಫಾ ಬೆಂಗಿಯಾ ಆದೇಶದಂತೆ ಪಕ್ಷ ಪೇಮಾ ಖಂಡು ಶಾಸಕಾಂಗ ಪಕ್ಷದ ನಾಯಕನಲ್ಲ, ಈ ಸ್ಥಾನಕ್ಕಿರುವ ಯಾವುದೇ ಅಧಿಕಾರವನ್ನು ಅವರು ನಡೆಸುವ ಹಾಗಿಲ್ಲ ಎಂದು ಪಕ್ಷ ಘೋಷಿಸಿದ್ದು, ಅವರು ನಡೆಸುವ ಯಾವುದೇ ಸಭೆಗಳಲ್ಲಿ ಪಾಲ್ಗೊಳ್ಳದಂತೆ ಆದೇಶ ನೀಡಿದೆ. 
 
ಅಮಾನತುಗೊಂಡವರಲ್ಲಿ ಉಪಮುಖ್ಯಮಂತ್ರಿ ಚೌನ ಮೈನ್ ಕೂಡ ಸೇರಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ