ಕಾವೇರಿ ವಿವಾದ: ಕೇಂದ್ರದ ವಿರುದ್ಧ ಜಯಾ ಆದೇಶ

ಶನಿವಾರ, 17 ಸೆಪ್ಟಂಬರ್ 2016 (09:15 IST)
ಕಾವೇರಿ ವಿವಾದ ಬಗೆ ಹರಿಸಲು ಕೇಂದ್ರ ಸರ್ಕಾರ ಕಾವೇರಿ ನೀರು ನಿಯಂತ್ರಣ ಮಂಡಳಿ ಮತ್ತು ಕಾವೇರಿ ನಿರ್ವಹಣಾ ಸಮಿತಿ ರಚನೆಗೆ ಕೇಂದ್ರ ಸರ್ಕಾರ ಮುಂದಾಗಲಿಲ್ಲ ಎಂದು ತಮಿಳುನಾಡು ಸಿಎಂ ಜಯಲಲಿತಾ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಹೀಗಾಗಿಯೇ ನಮ್ಮ ಪಾಲಿನ ನೀರು ಪಡೆದುಕೊಳ್ಳಲು ಸುಪ್ರೀಂಕೋರ್ಟ್ ಮೆಟ್ಟಿಲೇರಬೇಕಾಯಿತು ಎಂದು ಅವರು ಹೇಳಿದ್ದಾರೆ. 

ಸಾಂಬಾ ಬೆಳೆಗೆ ನೀರಿನ ಕೊರತೆಯನ್ನೆದುರಿಸುತ್ತಿರುವ ರೈತರಿಗೆ ಮೆಟ್ಟೂರು ಜಲಾಶಯದಿಂದ ನೀರು ಬಿಡುವಂತೆ ತಮಿಳುನಾಡು ಸಿಎಂ ಜೆ. ಜಯಲಲಿತಾ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
 
ಸುಪ್ರೀಕೋರ್ಟ್ ಆದೇಶದಂತೆ ಕರ್ನಾಟಕ ಕೂಡ ಕಾವೇರಿ ನೀರನ್ನು ಹರಿಸುತ್ತಿರುವುದರಿಂದ ಸ್ಥಿರ ಒಳ ಹರಿವಿರುವ ಕಾರಣ ಸೆಪ್ಟೆಂಬರ್ 20 ರಿಂದ ಮೆಟ್ಟೂರು ಜಲಾಶಯದ  ಎಲ್ಲ ಗೇಟುಗಳನ್ನು ತೆರೆದು ಕೃಷಿಕರಿಗೆ ನೀರು ಹರಿಸಲು ಸೂಚಿಸಲಾಗಿದೆ. 
 
ಮೆಟ್ಟೂರು ಜಲಾಶಯದಲಲ್ಲಿ ಸದ್ಯ 84.76 ಅಡಿ ನೀರಿದ್ದು ಇದರ ಸಾಮರ್ಥ್ಯ 120 ಅಡಿ. ಕರ್ನಾಟಕ ಪ್ರತಿನಿತ್ಯ 12 ಕ್ಯೂಸೆಕ್ಸ್ ನೀರು ಹರಿಸುತ್ತಿದ್ದು ನೀರಿನ ಸಂಗ್ರಹಣೆ ಹೆಚ್ಚಲಿದೆ.
 
ಕರ್ನಾಟಕ ಸರಕಾರ ಬಿಳಿಗುಂಡ್ಲು ಜಲಾಶಯದಿಂದ ಸೆಪ್ಟೆಂಬರ್ 14 ರವರೆಗೆ 8.92 ಟಿಎಂಸಿ ನೀರು ತಮಿಳುನಾಡಿಗೆ ಬಿಟ್ಟಿದೆ ಎಂದು ಮುಖ್ಯಮಂತ್ರಿ ಜೆ. ಜಯಲಲಿತಾ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ