10 ರೂ. ಕಾಯಿನ್ ತಗೊಳ್ಳಲ್ಲ ಅಂತ ಎಲ್ಲರೂ ಹೇಳಿದ್ದನ್ನು ಕೇಳಿ ಬೇಸತ್ತ ವ್ಯಕ್ತಿಯೊಬ್ಬ ಅಂತಹ ಕಾಯಿನ್ ಗಳನ್ನೇ ಜೋಡಿಸಿಟ್ಟು 6 ಲಕ್ಷ ರೂ. ಕಾರು ಖರೀದಿಸಿದ್ದಾನೆ!
ಹೌದು, ತಮಿಳುನಾಡಿನ ಧರ್ಮಪುರಿಯ ವಾಹನ ಡೀಲರ್ ಉದ್ಯೋಗಿ ಆರೂರ್ ಎಂಬಾತ ಹಲವು ತಿಂಗಳ ಕಾಲ 10 ರೂ. ಕಾಯಿನ್ ಜೋಡಿಸಿಟ್ಟು ಕಾರು ಖರೀದಿಸಿದ್ದಾರೆ.
10 ರೂ.ಕಾಯಿನ್ ಯಾರೂ ತಗೊಳ್ಳಲ್ಲ. ಇದು ವ್ಯರ್ಥ ಎಂದುಕೊಂಡು ಮಕ್ಕಳು 10 ರೂ. ಕಾಯಿನ್ ನೊಂದಿಗೆ ಆಡುತ್ತಿರುವುದನ್ನು ಗಮನಿಸಿದ ನಂತರ ಈ ಕಾಯಿನ್ ಗಳಿಂದಲೇ ಕಾರು ಖರೀದಿಗೆ ನಿರ್ಧರಿಸಿದರು.
ವಿಶೇಷ ಅಂದರೆ ಡೀಲರ್ ಕೂಡ ಆರಂಭದಲ್ಲಿ 10 ರೂ. ಕಾಯಿನ್ ಪಡೆಯಲು ಹಿಂಜರಿದರು. ಆದರೆ ನಂತರ ಹಣ ಪಡೆದು ಕಾರು ನೀಡಲು ಒಪ್ಪಿದರು.
ಕಾರು ಖರೀದಿಸಿದ ನಂತರ ಸಂತಸ ಹಂಚಿಕೊಂಡ ಆರೂರ್, ನಮ್ಮಮ್ಮ ಚಿಕ್ಕ ಅಂಗಡಿ ಇಟ್ಟುಕೊಂಡಿದ್ದಾರೆ. ಅವರಿಗೆ ಪ್ರತಿನಿತ್ಯ ಹಲವಾರು 10 ರೂ. ಕಾಯಿನ್ ಗಳು ಬರುತ್ತಿದ್ದವು. ಆದರೆ ಯಾರೂ ಕೂಡ ವಾಪಸ್ ಪಡೆಯುತ್ತಿರಲಿಲ್ಲ. ಆರ್ ಬಿಐ ಕೂಡ 10 ರೂ. ವ್ಯರ್ಥ ಅಲ್ಲ ಎಂದು ಹೇಳಿದ್ದರೂ ಜನರು ಯಾಕೆ ಹೀಗೆ ಮಾಡುತ್ತಿದ್ದಾರೆ ಗೊತ್ತಾಗುತ್ತಿಲ್ಲ ಎಂದು ಹೇಳಿದ್ದಾರೆ.