5 ಟಿಎಂಸಿ ಕಾವೇರಿ ನೀರು ಬಿಡಲು ಕೋರಿ ಸುಪ್ರೀಂಕೋರ್ಟ್`ಗೆ ಅರ್ಜಿ ಸಲ್ಲಿಸಿದ ತಮಿಳುನಾಡು
ಬುಧವಾರ, 5 ಜುಲೈ 2017 (12:19 IST)
ಕಾವೇರಿ ನೀರು ವಿವಾದ ಕುರಿತಂತೆ ಮತ್ತೆ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಕೂಡಲೇ 5 ಟಿಎಂಸಿ ನೀರು ಬಿಡುವಂತೆ ಕೋರಿ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್`ಗೆ ಅರ್ಜಿ ಸಲ್ಲಿಸಿದೆ. 2016ರಲ್ಲಿ 5 ಟಿಎಂಸಿ ನೀರಿನ ಕೊರತೆ ಇದೆ. ಹೀಗಾಗಿ, ಕೂಡಲೇ ನೀರು ಬಿಡುವಂತೆ ಆದೇಶಿಸಬೇಕೆಂದು ತಮಿಳುನಾಡು ವಾದಿಸಿದೆ.
ರಾಜ್ಯದಲ್ಲಿ ನೀರಿನ ಕೊರತೆ ಇದ್ದರೂ ಕರ್ನಾಟಕ ಸರ್ಕಾರ ಕಬಿನಿಯಿಂದ ನೀರು ಬಿಡುತ್ತಿರುವುದಕ್ಕೆ ಆಕ್ರೊಶ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ತಮಿಳುನಾಡು ಸರ್ಕಾರ ನೀರಿಗಾಗಿ ಬೇಡಿಕೆ ಇಟ್ಟಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಕಳೆದ ವರ್ಷರಾಜ್ಯದಲ್ಲಿ ಬರಗಾಲ ಆವರಿಸಿದ್ದರೂ ಕರ್ನಾಟಕ ಸರ್ಕಾರ ತಮಿಳುನಾಡಿಗೆ ನ್ಯಾಯ ಮಂಡಳಿ ಸೂಚನೆಯಂತೆ ನೀರು ಹರಿಸಿದೆ. ಆದರೂ, ಈಗ ತಮಿಳುನಾಡು ಹಳೆ ಬಾಕಿ ನೀರನ್ನ ಬಿಡುವಂತೆ ತಗಾದೆ ತೆಗೆದಿದೆ.