ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಇನ್ನಿಲ್ಲ

ಮಂಗಳವಾರ, 6 ಡಿಸೆಂಬರ್ 2016 (06:15 IST)
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಅಮ್ಮ ಎಂದೇ ಪ್ರೀತಿಯಿಂದ ಕರೆಯಿಸಿಕೊಳ್ಳುವ ಜಯಲಲಿತಾ ನಿನ್ನೆ ರಾತ್ರಿ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.  ಬಹುದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಜಯಲಲಿತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಭಾನುವಾರ ಸಂಜೆ ಹೃದಯಾಘಾತಕ್ಕೊಳಗಾಗಿದ್ದರು.

ನಿನ್ನೆ ಸಂಜೆ ಅವರ ಸ್ಥಿತಿ ತೀರಾ ಹದಗೆಟ್ಟಿತ್ತು. ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ತಜ್ಞ ವೈದ್ಯರ ತಂಡ ಮಾಡಿದ ಯಾವ ಪ್ರಯತ್ನವೂ ಫಲಗೊಡಲಿಲ್ಲ. ಇದೀಗ ಅಮ್ಮನನ್ನು ಕಳೆದುಕೊಂಡ ತಮಿಳಿನಾಡಿನಲ್ಲಿ ದುಃಖ ಮಡುಗಟ್ಟಿದೆ.

ನಿನ್ನೆ ಸಂಜೆ ಕೆಲವು ತಮಿಳು ಮಾಧ್ಯಮಗಳು ಜಯಲಲಿತಾ ತೀರಿಕೊಂಡ ಸುದ್ದಿ ಪ್ರಕಟಿಸಿ ಎಡವಟ್ಟು ಮಾಡಿಕೊಂಡಿದ್ದವು. ಆದರೆ ಅಪೋಲೋ ಆಸ್ಪತ್ರೆ ಅಧಿಕೃತ ಪ್ರಕಟಣೆಯಲ್ಲಿ ಅವರಿನ್ನೂ ಕೃತಕ ಉಸಿರಾಟದ ನೆರವಿನಿಂದ ಬದುಕಿದ್ದಾರೆ ಎಂದು ಹೇಳಲಾಗಿತ್ತು. ನಂತರ ರಾತ್ರಿ 11.30 ರ ವೇಳೆಗೆ ವೈದ್ಯರು ಅಧಿಕೃತವಾಗಿ ಜಯಲಲಿತಾ ಇನ್ನಿಲ್ಲ ಎನ್ನುವ ಸಂಗತಿಯನ್ನು ದೃಢಪಡಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ