ತಮಿಳುನಾಡು ವಿಧಾನಸಭೆಯಲ್ಲಿ ವಿಶ್ವಾಸಮತಯಾಚನೆ ಸಂದರ್ಭದಲ್ಲಿ ನಡೆದ ಕಲಾಪದ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ಡಿಎಂಕೆ ಪಕ್ಷಧ ಮುಖಂಡರಿಗೆ ಮದ್ರಾಸ್ ಹೈಕೋರ್ಟ್ ನಿರ್ದೇಶನ ನೀಡಿದೆ.
ವಿಧಾನಸಭೆ ಅಧಿವೇಶನದಲ್ಲಿ ವಿಪಕ್ಷಗಳನ್ನು ಹೊರಹಾಕಿ ಕಾನೂನಿಗೆ ವಿರೋಧವಾಗಿ ವಿಶ್ವಾಸಮತಯಾಚನೆ ಪಡೆಯಲಾಗಿದೆ. ಕೂಡಲೇ ಸರಕಾರವನ್ನು ವಜಾಗೊಳಿಸಬೇಕು ಎಂದು ಡಿಎಂಕೆ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು.
ಕೋರ್ಟ್‌ನಲ್ಲಿ ಡಿಎಂಕೆ ಪಕ್ಷದ ಪರವಾಗಿ ವಾದ ಮಾಡಿದ ವಕೀಲ ಕೆ.ಬಾಲು, 11 ದಿನಗಳ ಕಾಲ 124 ಶಾಸಕರನ್ನು ರೆಸಾರ್ಟ್‌ನಲ್ಲಿ ಕೂಡಿ ಹಾಕಿ ಜೀವ ಬೆದರಿಕೆಯೊಡ್ಡಲಾಗಿತ್ತು. ಅನೇಕ ಶಾಸಕರು ಪೊಲೀಸರಿಗೆ ನೀಡಿದು ದೂರಿನ ದಾಖಲೆಗಳು ನಮ್ಮ ಬಳಿಯಿವೆ ಎಂದು ವಾದ ಮಂಡಿಸಿದರು.
ಅಧಿವೇಶನ ಕಲಾಪದ ವಿಡಿಯೋ ಸೇರಿದಂತೆ ಇನ್ನಿತರ ದಾಖಲೆಗಳನ್ನು ಕೋರ್ಟ್ ನೀಡುವಂತೆ ಆದೇಶಿಸಿದೆ. ಮುಂಬರುವ 27 ರಂದು ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುವುದು ಎಂದು ವಿಚಾರಣೆ ಮುಂದೂಡಿದೆ.
ಕೋರ್ಟ್ ನಿಲುವಿನಿಂದ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿಗೆ ತಾತ್ಕಾಲಿಕವಾಗಿ ನಿರಾಳತೆ ದೊರೆತಂತಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.