ತಮಿಳುನಾಡು ಬಿಕ್ಕಟ್ಟು: ಇಂದು ಸಂಜೆ ಗವರ್ನರ್‌ರಿಂದ ಮಹತ್ವದ ನಿರ್ಧಾರ

ಬುಧವಾರ, 15 ಫೆಬ್ರವರಿ 2017 (16:21 IST)
ತಮಿಳುನಾಡಿನಲ್ಲಿ ಎದುರಾಗಿರುವ ರಾಜಕೀಯ ಬಿಕ್ಕಟ್ಟು ಶಮನಗೊಳಿಸಲು ರಾಜ್ಯಪಾಲ ಸಿ.ವಿದ್ಯಾಸಾಗರ್ ರಾವ್ ಇಂದು ಸಂಜೆ ಮಹತ್ವದ ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ರಾಜಭವನದ ಮೂಲಗಳು ತಿಳಿಸಿವೆ.
ಎಐಎಡಿಎಂಕೆ ಮುಖಂಡ ಮಾಜಿ ಸಚಿವ ಎಡಪ್ಪಾಡಿ ಪಳನಿಸ್ವಾಮಿ ಮತ್ತು ಹಂಗಾಮಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ರಾಜ್ಯಪಾಲರನ್ನು ಭೇಟಿ ಮಾಡಿ ಬಹುಮತ ಸಾಬೀತಿಗೆ ಅವಕಾಶ ನೀಡುವಂತೆ ಕೋರಿದ್ದಾರೆ.
 
ಮತ್ತೊಂದೆಡೆ ಹಂಗಾಮಿ ಸಿಎಂ ಪನ್ನೀರ್ ಸೆಲ್ವಂ, ತಮ್ಮ ಮೇಲೆ ಒತ್ತಡ ಹೇರಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಾಯಿತು ಎಂದು ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಕಾನೂನು ತಜ್ಞರ ಪ್ರಕಾರ ಸೆಲ್ವಂ ತಮ್ಮ ಮೇಲೆ ಹೇರಿದ ಒತ್ತಡವನ್ನು ಸಾಬೀತುಪಡಿಸಿದಲ್ಲಿ ರಾಜ್ಯಪಾಲರು ರಾಜೀನಾಮೆಯನ್ನು ತಿರಸ್ಕರಿಸಬಹುದಾಗಿದೆ ಎಂದು ಹೇಳಲಾಗುತ್ತಿದೆ.
 
ರಾಜ್ಯಪಾಲ ವಿದ್ಯಾಸಾಗರ್ ರಾವ್ ಇಂದು ಸಂಜೆ ಪಳನಿಸ್ವಾಮಿಯವರನ್ನು ಸರಕಾರ ರಚಿಸಲು ಆಹ್ವಾನ ನೀಡುತ್ತಾರೋ ಅಥವಾ ಪನ್ನೀರ್ ಸೆಲ್ವಂಗೆ ಮುಂದುವರಿಯುವಂತೆ ಅಥವಾ ಬಹುಮತ ಸಾಬೀತುಪಡಿಸುವಂತೆ ಕೋರುತ್ತಾರೋ ಎನ್ನುವುದು ಕಾದು ನೋಡಬೇಕಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ