ರಾಜ್ಯಪಾಲ, ರಾಷ್ಟ್ರಪತಿಗಳ ಅಂಕಿತವಿಲ್ಲದೇ ಕಾಯಿದೆ ಜಾರಿಗೊಳಿಸಿದ ತಮಿಳುನಾಡು
ಪ್ರಜಾಪ್ರಭುತ್ವದಲ್ಲಿ ರಾಜ್ಯಪಾಲರು ಸರ್ಕಾರ ಕಳುಹಿಸಿದ ಕಡತಗಳನ್ನು ಸಹಿ ಹಾಕದೇ ಇಟ್ಟುಕೊಳ್ಳುವಂತಿಲ್ಲ. ಆದರೆ ತಮಿಳುನಾಡು ರಾಜ್ಯಪಾಲರು ಈ ರೀತಿ ಕಡತಗಳನ್ನು ಸಹಿ ಹಾಕದೇ ಇಟ್ಟುಕೊಂಡಿದ್ದಕ್ಕೆ ಸುಪ್ರೀಂ ಚಾಟಿ ಬೀಸಿತ್ತು.
ಇದೀಗ ತಮಿಳುನಾಡು ಸರ್ಕಾರ ರಾಜ್ಯಪಲಾರನ್ನು ಧಿಕ್ಕರಿಸಿ ಕಾಯಿದೆಗಳನ್ನು ಜಾರಿಗೆ ತಂದಿದೆ. 2020 ರಿಂದ 2023 ರವರೆಗೆ ಅಂಗೀಕರವಾದ ಮಸೂದೆಗಳನ್ನು ತಮಿಳುನಾಡು ಸರ್ಕಾರ ರಾಜ್ಯಪಾಲರ ಅಂಕಿತವಿಲ್ಲದೇ ಸುಪ್ರೀಂಕೋರ್ಟ್ ತೀರ್ಪಿನ ಆಧಾರದಲ್ಲಿ ಜಾರಿಗೆ ತಂದಿದೆ.