ಅಹಮದಾಬಾದ್: ಬೆಂಕಿಯಿಂದ ಮಕ್ಕಳನ್ನು ಕಾಪಾಡಲು ಮಹಿಳೆಯೊಬ್ಬರು ಸಾಹಸಮಯವಾಗಿ ಅವರನ್ನು ಕಾಪಾಡಿದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ಘಟನೆ ಏಪ್ರಿಲ್ 11ರಂದು ಅಹಮದಾಬಾದ್‌ನ ವಸತಿ ಸಂಕೀರ್ಣವೊಂದರಲ್ಲಿ ನಡೆದಿದೆ.
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಬಹುಮಹಡಿಯ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಟ್ಟಡದಿಂದ ದಟ್ಟವಾದ ಹೊಗೆ ಹೊರಬರುತ್ತಿರುವುದನ್ನು ಕಾಣಬಹುದು. ಅದೇ ಮಹಡಿಯ ಬಾಲ್ಕನಿಯಲ್ಲಿ ಮಹಿಳೆಯೊಬ್ಬರು ಮೂವರು ಮಕ್ಕಳೊಂದಿಗೆ ಸಹಾಯಕ್ಕೆ ಬೇಡುತ್ತಿರುವುದನ್ನು ಕಾಣಬಹುದು.
ಮಹಿಳೆ ತನ್ನ ಮಕ್ಕಳ ಕೈಯನ್ನು ಹಿಡಿದು ಕೆಲಗಿಳಿಸಿದ್ದಾರೆ. ಕೆಳಗಿನ ಮಹಡಿಯಲ್ಲಿದ್ದ ವ್ಯಕ್ತಿಗಳು ಮಕ್ಕಳ ಕಾಲನ್ನು ಹಿಡಿದು ಅವರು ಪಾರು ಮಾಡುತ್ತಿರುವುದನ್ನು ಕಾಣಬಹುದು. ಮಹಿಳೆಯ ಧೈರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ನಗರದ ಖೋಖ್ರಾ ಪ್ರದೇಶದ ಬಹುಮಹಡಿ ಕಟ್ಟಡದಿಂದ ಕನಿಷ್ಠ 18 ಜನರನ್ನು ರಕ್ಷಿಸಲಾಗಿದೆ.
ಮಧ್ಯಾಹ್ನ 3:30 ರ ಸುಮಾರಿಗೆ ಬೆಂಕಿ ಪ್ರಾರಂಭವಾಯಿತು ಮತ್ತು ಸಂಜೆ 6 ಗಂಟೆಯ ಹೊತ್ತಿಗೆ ನಿಯಂತ್ರಣಕ್ಕೆ ತರಲಾಯಿತು ಎಂದು ಅಹಮದಾಬಾದ್ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ನಿಯಂತ್ರಣ ಕೊಠಡಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಯಾರಿಗೂ ಗಾಯಗಳಾಗಿಲ್ಲ ಎಂದು ಅವರು ಹೇಳಿದರು.
A family was rescued by two guys during #Fire ???? in an apartment in Ahmadabad, Gujarat.