ತಮಿಳುನಾಡು ಹೈಡ್ರಾಮಾ: ಇಂದು ಆಗುತ್ತಾ ಕ್ಲೈಮ್ಯಾಕ್ಸ್!?

ಗುರುವಾರ, 9 ಫೆಬ್ರವರಿ 2017 (09:08 IST)
ಚೆನ್ನೈ: ತಮಿಳುನಾಡಿನ ರಾಜಕೀಯ ಕೆಸರೆರಚಾಟ ಮುಂದುವರಿದಿದೆ. ಈ ನಡುವೆ ಇಂದು ರಾಜ್ಯಪಾಲ ವಿದ್ಯಾಸಾಗರ್ ರಾಜ್ಯಕ್ಕೆ ವಾಪಸಾಗುವ ನಿರೀಕ್ಷೆಯಿದೆ. ಆದರೆ ಸರ್ಕಾರ ರಚನೆ ಪ್ರಸ್ತಾಪ ಮಂಡನೆಗೆ ರಾಜ್ಯಪಾಲರು ಸಮಯಾವಕಾಶ ನೀಡಿಲ್ಲ.

 
ರಾಜ್ಯಪಾಲರು ಬಂದ ಬಳಿಕ ಶಶಿಕಲಾ ನೇತೃತ್ವದಲ್ಲಿ ಸರ್ಕಾರ ರಚನೆಗೆ ಹಕ್ಕು ಮಂಡಿಸುವ ಸಾಧ್ಯತೆಯಿದೆ. ಆದರೆ ಉದ್ದೇಶ ಪೂರ್ವಕವಾಗಿ ರಾಜ್ಯಕ್ಕೆ ಬಾರದೇ, ಭೇಟಿಗೆ ಸಮಯಾವಕಾಶವನ್ನೂ ನೀಡದೇ ಇರುವ ರಾಜ್ಯಪಾಲರ ವಿರುದ್ಧ ಶಶಿಕಲಾ ವಾಗ್ದಾಳಿ ನಡೆಸಿದ್ದಾರೆ.

ಈ ನಡುವೆ ಶಶಿಕಲಾ ವಿರುದ್ಧ ಬಂಡಾಯವೆದ್ದಿರುವ ಹಂಗಾಮಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಪಕ್ಷದ ನಿಯಮಾವಳಿಗೆ ವಿರುದ್ಧವಾಗಿ ಶಶಿಕಲಾ ಅವರನ್ನು ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆ ಮಾಡಲಾಗಿದೆ. ಹೀಗಾಗಿ ಅವರ ಆಯ್ಕೆ ಪ್ರಕ್ರಿಯೆಯನ್ನು ಅಮಾನ್ಯ ಮಾಡಬೇಕೆಂದು ಆಗ್ರಹಿಸಿದ್ದಾರೆ. ಈ ನಡುವೆ ರಾಷ್ಟ್ರಪತಿ ಭೇಟಿಗೆ ತೆರಳಿದ್ದ ಪ್ರತಿಪಕ್ಷ ಡಿಎಂಕೆ ಸದಸ್ಯರು ಭೇಟಿಯಾಗದೇ ವಾಪಸ್ಸಾಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ