ಟಾಟಾ ಸಂಸ್ಥೆಯ ಮಾಜಿ ಮುಖ್ಯಸ್ಥ ಸೈರಸ್ ಮಿಸ್ತ್ರಿ ದುರ್ಮರಣ
ಅಹಮ್ಮದಾಬಾದ್ ನಿಂದ ಮುಂಬೈಗೆ ರಸ್ತೆ ಮಾರ್ಗವಾಗಿ ತಮ್ಮ ಮರ್ಸಿಡಸ್ ಕಾರ್ ನಲ್ಲಿ ಪ್ರಯಾಣಿಸುತ್ತಿದ್ದಾಗ ಮುಂಬೈ ಸಮೀಪ ಪಾಲ್ಗರ್ ನಲ್ಲಿ ನಿಯಂತ್ರಣ ತಪ್ಪಿ ಡಿವೈಡರ್ ಗೆ ಕಾರು ಡಿಕ್ಕಿಯಾಗಿದ್ದು, ಸೈರಸ್ ಮಿಸ್ತ್ರಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಕಾರು ಚಲಾಯಿಸುತ್ತಿದ್ದ ಅವರ ಸ್ನೇಹಿತ ಡಾ. ಅನಂತ್ ಪಾಂಡೋಲೆ ಮತ್ತು ಅವರ ಪತ್ನಿಗೆ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.