ಬಿಕಾಂ ಪದವಿಯಲ್ಲಿ ಗಣಿತ, ಭೌತಶಾಸ್ತ್ರ ಕಲಿತಿದ್ದೇನೆ: ತೆಲುಗು ದೇಶಂ ಶಾಸಕ

ಗುರುವಾರ, 29 ಡಿಸೆಂಬರ್ 2016 (15:04 IST)
ಬಿಕಾಂ ಪದವಿಯಲ್ಲಿ ಭೌತಶಾಸ್ತ್ರ ಮತ್ತು ಗಣಿತ ಶಾಸ್ತ್ರ ಅಭ್ಯಾಸ ಮಾಡಿರುವುದಾಗಿ ಆಂಧ್ರಪ್ರದೇಶದ ಅಡಳಿತರೂಢ ಶಾಸಕರೊಬ್ಬರು ಹೇಳಿಕೆ ನೀಡಿ ವಿವಾದಕ್ಕೊಳಗಾಗಿದ್ದಾರೆ.
 
ಟೆಲಿವಿಜನ್‌ಗೆ ನೀಡಿದ ಸಂದರ್ಶನದಲ್ಲಿ ಶೈಕ್ಷಣಿಕ ಅರ್ಹತೆ ಕುರಿತಂತೆ ತೆಲುಗು ದೇಶಂ ಪಕ್ಷದ ಶಾಸಕ ಜಲೀಲ್ ಖಾನ್ ನೀಡಿದ ಹೇಳಿಕೆ ಹೊಸತೊಂದು ವಿವಾದ ಸೃಷ್ಟಿಹಾಕಿದೆ.
 
ಬಿ.ಕಾಂ ಪದ ಮಾಡಿರುವ ಉದ್ದೇಶವೇನು? ಚಾರ್ಟರ್ಡ್ ಅಕೌಂಟೆಂಟ್ ಆಗಬೇಕು ಎಂದು ಬಯಸಿದ್ದೀರಾ ಎಂದು ಸುದ್ದಿಗಾರರೊಬ್ಬರು, ಶಾಸಕ ಜಲೀಲ್ ಖಾನ್‌ಗೆ ಕೇಳಿದಾಗ, ನನಗೆ ಭೌತಶಾಸ್ತ್ರ ಮತ್ತು ಗಣಿತಶಾಸ್ತ್ರದಲ್ಲಿ ಆಸಕ್ತಿಯಿದ್ದರಿಂದ ಬಿಕಾಂ ಪದವಿಯನ್ನು ಮಾಡಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ. 
 
ನಂತರ ಸುಧಾರಿಸಿಕೊಂಡು ಮಾತನಾಢಿದ ಶಾಸಕ ಖಾನ್, ಬಿಕಾಂನಲ್ಲಿ ಭೌತಶಾಸ್ತ್ರ ಮತ್ತು ಗಣಿತಶಾಸ್ತ್ರವನ್ನು ಕಲಿಸುವುದಿಲ್ಲ. ಆದರೆ, ಖಂಡಿತವಾಗಿಯೂ ಬಿಕಾಂನಲ್ಲಿ ವಿಜ್ಞಾನ ವಿಷಯಗಳನ್ನು ಕಲಿಸಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ. 
 
ಬಿಕಾಂನಲ್ಲಿ ಭೌತಶಾಸ್ತ್ರ ಮತ್ತು ಗಣಿತಶಾಸ್ತ್ರ ಕಲಿಸುವುದಿಲ್ಲ ಎಂದು ಹೇಳಿದವರಾರು? ಅಕೌಂಟ್ಸ್ ಅಂದರೆ ಭೌತಶಾಸ್ತ್ರ ಮತ್ತು ಗಣಿತಶಾಸ್ತ್ರ ಅಲ್ಲವೇ? ನೀವೇ ಮರೆತುಹೋಗಿದ್ದೀರಿ ಎಂದು ವರದಿಗಾರನಿಗೆ ತಿರುಗೇಟು ನೀಡಿ ತಮ್ಮ ಅಜ್ಞಾನವನ್ನು ಮೆರೆದಿದ್ದಾರೆ.
 
ನನಗೆ ಬಾಲ್ಯದಿಂದಲೂ ಗಣಿತ ಶಾಸ್ತ್ರದಲ್ಲಿ ಆಸಕ್ತಿಯಿತ್ತು, ನಾನು ಗಣಿತ ವಿಷಯದಲ್ಲಿ 100ಕ್ಕೆ 100 ರಷ್ಟು ಅಂಕಗಳನ್ನು ಪಡೆದಿದ್ದೇನೆ. ನನಗೆ ಲೆಕ್ಕ ಮಾಡಲು ಕ್ಯಾಲ್‌ಕುಲೇಟರ್ ಅಗತ್ಯವಿಲ್ಲ ಎಂದು ತೆಲುಗು ದೇಶಂ ಶಾಸಕ ಜಲೀಲ್ ಖಾನ್ ತಮ್ಮ ಅದ್ಭುತ (ಅ)ಜ್ಞಾನವನ್ನು ಪ್ರದರ್ಶಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ