ಸರ್ಕಾರದ ವಿರುದ್ಧ ತಿರುಗಿಬಿದ್ದ ಶಿಕ್ಷಕರು!

ಶುಕ್ರವಾರ, 21 ಜನವರಿ 2022 (06:03 IST)
ನವದೆಹಲಿ : ಕಾಲೇಜುಗಳಿಗೆ ಹಣವನ್ನು ಬಿಡುಗಡೆ ಮಾಡದಿದ್ರೆ ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ದೆಹಲಿ ವಿಶ್ವವಿದ್ಯಾನಿಲಯ ಶಿಕ್ಷಕರ ಸಂಘ(ಡಿಯುಟಿಎ) ಸರ್ಕಾರಕ್ಕೆ ಬೆದರಿಕೆ ಹಾಕಿದೆ.

12 ವಿಶ್ವವಿದ್ಯಾಲಯಗಳಿಗೆ ಹಣವನ್ನು ಬಿಡುಗಡೆ ಮಾಡದಿರುವ ಕಾರಣ ಡಿಯುಟಿಎ ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಬೆದರಿಕೆ ಹಾಕಿದೆ. ಕಾಲೇಜುಗಳ ಹಣ ಬಳಕೆಯನ್ನು ವಿಶ್ಲೇಷಿಸಲು ಸರ್ಕಾರವು ಸಮಿತಿಯನ್ನು ರಚಿಸಿರುವುದನ್ನು ಡಿಯುಟಿಎ ಪ್ರಶ್ನಿಸಿದೆ. 

ಸಮಿತಿ ರಚನೆ ಕುರಿತು ಪ್ರಶ್ನಿಸಿದ ಡಿಯುಟಿಎ ಅಧ್ಯಕ್ಷ ಎಕೆ ಭಾಗಿ, ಸಮಿತಿ ರಚನೆಯ ಉದ್ದೇಶವೇನು? ಆಮ್ ಆದ್ಮಿ ಪಕ್ಷದಿಂದ ಚುನಾಯಿತ ಸದಸ್ಯರನ್ನು ಹೊಂದಿರುವ ಆಡಳಿತ ಮಂಡಳಿಗಳು ಈಗಾಗಲೇ ಬಜೆಟ್ ಅನ್ನು ಅನುಮೋದಿಸಿದೆ. ಆದರೆ ಈ ಸಮಿತಿ ಅನುಮೋದಿಸಿದ ಬಜೆಟ್ಗಳನ್ನು ಮತ್ತೆ ಪರಿಶೀಲನೆ ನಡೆಸುತ್ತಿದೆ ಎಂದು ಆಕ್ರೋಶ ಹೊರಹಾಕಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ