ಬೇಕಾದಾಗ ಕರೆದು, ಬೇಡವಾದಾಗ ಬಿಡಲು ಶಿಕ್ಷಕರು ಟ್ಯಾಕ್ಸಿ ಚಾಲಕರೇ: ಪ್ರದಾನ್ ಗರಂ

ಸೋಮವಾರ, 29 ಆಗಸ್ಟ್ 2016 (17:33 IST)
ನಿವೃತ್ತ ಶಿಕ್ಷಕರನ್ನು ಕಾಲ್ ಮಾಡಿ ಕೆಲಸಕ್ಕೆ ಬರುವಂತೆ ಸೂಚಿಸಲು ಅವರೇನು ಟ್ಯಾಕ್ಸಿ ಚಾಲಕರೇ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರದಾನ್ ಖಾರವಾಗಿ ಪ್ರಶ್ನಿಸಿದ್ದಾರೆ.  ಶಾಲೆಗಳಲ್ಲಿ ಹುದ್ದೆಗಳಿಗೆ ತಾತ್ಕಾಲಿಕವಾಗಿ ತುಂಬಲು ನಿವೃತ್ತ ಶಿಕ್ಷಕರನ್ನು ನೇಮಿಸುವ ಒಡಿಶಾ ಸರ್ಕಾರದ ಕ್ರಮವನ್ನು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರದಾನ್ ಟೀಕಿಸುತ್ತಾ, ಅವರೇನು ಟ್ಯಾಕ್ಸಿ ಚಾಲಕರೇ ಎಂದು ಪ್ರಶ್ನಿಸಿದರು.

 ಶಿಕ್ಷಕರನ್ನು ಕರೆಯ ಆಧಾರದ ಮೇಲೆ ತರಗತಿ ತೆಗೆದುಕೊಳ್ಳಲು ಕ್ಯಾಬ್ ಚಾಲಕರ ರೀತಿಯಲ್ಲಿ ನೇಮಿಸಿಕೊಳ್ಳಬಾರದು ಎಂದು ಪ್ರಧಾನ್ ಹೇಳಿದರು.
 
ನಮ್ಮ ಶಿಕ್ಷಕರು ಟ್ಯಾಕ್ಸಿ ಚಾಲಕರಲ್ಲ. ಬೇಕಾದಾಗ ಬನ್ನಿ , ಬೇಡವಾದಾಗ ಹೋಗಿ ಎಂದು ಹೇಳುವುದಕ್ಕೆ ಅವರು ಕ್ಯಾಬ್ ಚಾಲಕರಲ್ಲ. ನಮಗೆ ಶಿಕ್ಷಣ ನೀಡಲು ತರಬೇತಾದ ಗುಣಮಟ್ಟದ ಶಿಕ್ಷಕರ ಕೊರತೆಯಿಲ್ಲ ಎಂದು ಪ್ರಧಾನ್ ಪ್ರತಿಪಾದಿಸಿದರು.
 
ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟವಾಡದಂತೆ ಸೂಚಿಸಿದ ಅವರು,  ಶಿಕ್ಷಕರಿಗೆ ಕರೆ ಮಾಡಿ ಕರೆಸಿಕೊಳ್ಳುವ ಯೋಜನೆ ಬದಲಿಗೆ ವಿದ್ಯಾರ್ಥಿಗಳ ಏಳಿಗೆಗೆ ಕಾಯಂ ವ್ಯವಸ್ಥೆ ಮಾಡಬೇಕೆಂದು ಅವರು ಸೂಚಿಸಿದರು. 
 
ಪ್ರಧಾನ್ ಅವರ ಟೀಕೆಗೆ ಆಕ್ಷೇಪ ವ್ಯಕ್ತಪಡಿಸಿದ ರಾಜ್ಯ ಶಾಲೆ ಮತ್ತು ಸಮೂಹ ಶಿಕ್ಷಣ ಸಚಿವ ದೇವಿ ಪ್ರಸಾದ್ ಮಿಶ್ರಾ ಕೇಂದ್ರ ಸಚಿವರು ಶಿಕ್ಷಕರನ್ನು ಟ್ಯಾಕ್ಸಿ ಚಾಲಕರಿಗೆ ಹೋಲಿಸಬಾರದು ಎಂದಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ