ವಾಂಟೆಂಡ್ ಶೂಟರ್ ಜತೆ ಸಚಿವ

ಗುರುವಾರ, 15 ಸೆಪ್ಟಂಬರ್ 2016 (08:37 IST)
ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಪುತ್ರ ಹಾಗೂ ಬಿಹಾರ್ ಸಚಿವ ತೇಜ್ ಪ್ರತಾಪ್ ವಿವಾದದಲ್ಲಿ ಸಿಲುಕಿದ್ದಾರೆ.

ಪತ್ರಕರ್ತನ ಹತ್ಯೆ ಆರೋಪ ಹೊತ್ತಿರುವ ಮೊಹಮ್ಮದ್ ಕೈಫ್ ಮತ್ತು  ಇತ್ತೀಚಿಗಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಶಹಾಬುದ್ದೀನ್ ಜತೆ ಅವರು ಕಾಣಿಸಿಕೊಂಡಿರುವುದೀಗ ವಿವಾದವನ್ನು ಸೃಷ್ಟಿಸಿದೆ.
 
ಸಿವಾನ್ ಪತ್ರಿಕೆ ಮುಖ್ಯಸ್ಥ ರಾಜದೇವ್ ರಂಜನ್ ಹತ್ಯೆಯ ಶಂಕಿತ ಆರೋಪಿಗಳಾದ  ಮೊಹಮ್ಮದ್ ಖೈಪ್ ಮತ್ತು  ಮತ್ತು ಮೊಹಮ್ಮದ್ ಜಾವೇದ್ ಪೊಲೀಸರ ಕಣ್ಣಿಗೆ ಕಾಣಿಸಿಕೊಳ್ಳದೇ ಓಡಾಡಿಕೊಂಡಿದ್ದಾರೆ. ಆದರೆ ಇತ್ತೀಚಿಗೆ ಅವರಿಬ್ಬರು ಸಮಾರಂಭವೊಂದರಲ್ಲಿ  ತೇಜ್ ಪ್ರತಾಪ್ ಜತೆ ಕಾಣಿಸಿಕೊಂಡಿದ್ದರು. ಆ ಸಮಾರಂಭದಲ್ಲಿ ಶಹಾಬುದ್ದೀನ್ ಕೂಡ ಇದ್ದಾನೆ. 
 
ಸಚಿವನ ಜತೆಯಲ್ಲಿದ್ದ ಸಂದರ್ಭದಲ್ಲಿ ಆರೋಪಿಗಳನ್ನು ಬಂಧಿಸಲಿಲ್ಲವೇಕೆ ಎಂದು ಪ್ರಶ್ನೆ ಎದ್ದಿದೆ. 
 
ಪ್ರತಿದಿನ ಸಾವಿರಾರು ಜನರು ತಮ್ಮ ಜತೆ ಫೋಟೋ ತೆಗೆಸಿಕೊಳ್ಳುತ್ತಾರೆ. ಅವರನ್ನೆಲ್ಲ ನೆನಪಿಟ್ಟುಕೊಳ್ಳಲು ಸಾಧ್ಯವಿಲ್ಲ ಎಂದು ತೇಜ್ ಪ್ರತಾಪ್ ಸಮಜಾಯಿಷಿ ನೀಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ