ತೆಲಂಗಾಣದ ಗರ್ಭಿಣಿಯರಿಗೆ ಸಿಗಲಿದೆ ಕೆಸಿಆರ್ ಕಿಟ್.. ಜೊತೆಗೆ 15 ಸಾವಿರ ರೂ. ನೆರವು

ಶನಿವಾರ, 3 ಜೂನ್ 2017 (15:38 IST)
ಸಿಎಂ ಕೆ.ಸಿ. ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ಸರ್ಕಾರ ಬಡ ಮಹಿಳೆಯರಿಗೆ ನೆರವಾಗುವ ದೃಷ್ಟಿಯಿಂದ ಗರ್ಭಿಣಿಯರಿಗೆ ಕೆಸಿಆರ್ ಕಿಟ್ ವಿತರಣೆಗೆ ಮುಂದಾಗಿದೆ. ಕೆಸಿಆರ್ ಕಿಟ್ ಯೋಜನೆಗೆ ಶನಿವಾರ ಹೈದ್ರಾಬಾದ್ ಸರ್ಕಾರಿ ಆಸ್ಪತ್ರೆಯಲ್ಲಿ ಚಾಲನೆ ನೀಡಲಾಗಿದೆ.

ರಾಜ್ಯದ ಬಡ ಮಹಿಳೆಯರ ಮತ್ತು ಮಕ್ಕಳ ಕ್ಷೇಮಾಭಿವೃದ್ಧಿಗೆ 2000 ರೂ. ಬೆಲೆಯ ಕಿಟ್ ನೀಡಲಾಗುತ್ತಿದ್ದು, ಇದರಲ್ಲಿ ತಾಯಿ ಮತ್ತು ಮಗುವಿಗೆ ಸೋಪ್, ಪೌಡರ್, ಬೇಬಿ ಆಯಿಲ್, ತೊಟ್ಟಿಲು, ಸೊಳ್ಳೆ ಪರದೆ, ಮಹಿಳೆಯ ಬಟ್ಟೆ, ಹ್ಯಾಂಡ್ ಬ್ಯಾಗ್, ಟವಲ್, ನ್ಯಾಪ್ಕಿನ್, ಡೈಪರ್, ಶಾಂಪೂ ಮತ್ತು ಮಕ್ಕಳ ಆಟಿಕೆಗಳು ಇರಲಿವೆ. ಇದರ ಜೊತೆ ಹೆಣ್ಣುಮಗುವನ್ನೆತ್ತ ತಾಯಿಗೆ 15 ಸಾವಿರ ರೂ. ಮತ್ತು ಗಂಡು ಮಗುವನ್ನೆತ್ತ ತಾಯಿಗೆ 14 ಸಾವಿರ ರೂ. ನೀಡಲಾಗುತ್ತೆ. ಸರ್ಕಾರಿ ಆಸ್ಪತ್ರೆಗಳನ್ನ ಸದುಪಯೋಗಪಡಿಸಿಕೊಳ್ಳಬೇಕೆಂಬ ದೃಷ್ಟಿಯಿಂದ ಸರ್ಕಾರ ಈ ಯೋಜನೆ ತಂದಿದೆ.

4 ಹಂತಗಳಲ್ಲಿ ಮಹಿಳೆಯರಿಗೆ ಈ ಹಣ ಸಿಗಲಿದೆ. ಮೊದಲ ಕಂತನ್ನ ತಾಯಿ ಮತ್ತು ಮಗುವಿನ ರಕ್ಷಣಾ ಪತ್ರ ಪಡೆದ ಕೂಡಲೇ ಪೋಷಣೆಗಾಗಿ 3000 ರೂ. ನೀಡಲಾಗುತ್ತೆ. ಡೆಲಿವರಿ ಸಂದರ್ಭ ಕೆಸಿಆರ್ ಕಿಟ್ ಜೊತೆ 5000 ರೂ. ನೀಡಲಾಗುತ್ತೆ. 3 ಮತ್ತು 4ನೇ ಕಂತುಗಳನ್ನ 2000 ರೂ. ಮತ್ತು 3000 ರೂ. ಹಣವನ್ನ ಮಗುವಿಗೆ ಲಸಿಕಾ ವೆಚ್ಚವಾಗಿ ನೀಡಲಾಗುತ್ತೆ. ಗರ್ಭಿಣಿಯ ಅಕೌಂಟಿಗೆ ನೇರವಾಗಿ ಹಣ ಜಮೆಯಾಗುತ್ತೆ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಲಿಂಕ್ ಕ್ಲಿಕ್ ಮಾಡಿ..

http://kannada.
fantasycricket.webdunia.com/

ವೆಬ್ದುನಿಯಾವನ್ನು ಓದಿ