ತೆಲಂಗಾಣದ ಗೃಹ ಸಚಿವ ಮಹಮ್ಮದ್ ಅಲಿಗೆ ಕೊರೊನಾ ಸೋಂಕು ದೃಢ

ಮಂಗಳವಾರ, 30 ಜೂನ್ 2020 (08:05 IST)
ಹೈದರಾಬಾದ್ : ತೆಲಂಗಾಣದ ಗೃಹ ಸಚಿವ ಮಹಮ್ಮದ್ ಅಲಿ(67) ಅವರಿಗೆ ಕೊರೊನಾ ಸೋಂಕು ತಗುಲಿರುವುದಾಗಿ ತಿಳಿದುಬಂದಿದೆ.

4 ದಿನಗಳ ಹಿಂದೆ ಅವರ ಗನ್ ಮ್ಯಾನ್ ಗಳಿಗೆ ಕೊರೊನಾ ಸೋಂಕು ತಗುಲಿತ್ತು. ಈ ಹಿನ್ಬಲೆಯಲ್ಲಿ ಅವರನ್ನು ಕೊರೊನಾ ಟೆಸ್ಟ್ ಗೆ ಒಳಪಡಿಸಿದ್ದು, ಇದೀಗ ಅವರಿಗೂ ಕೂಡ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ಈ ಹಿನ್ನಲೆಯಲ್ಲಿ ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಸಚಿವರ ಆರೋಗ್ಯ ಸ್ಥಿರವಾಗಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ