ತಂದೆಯಿಂದಲೇ ಹತ್ಯೆಯಾದ ಟೆನ್ನಿಸ್ ತಾರೆ ರಾಧಿಕಾ, ಇದೊಂದು ಮುಚ್ಚಿದ ಪ್ರಕರಣ ಎಂದಿದ್ಯಾಕೆ ಖಾಕಿ

Sampriya

ಸೋಮವಾರ, 14 ಜುಲೈ 2025 (15:55 IST)
ಬೆಂಗಳೂರು:   ರಾಧಿಕಾ ಯಾದವ್ ಹತ್ಯೆಯು "ಮುಕ್ತ ಮತ್ತು ಮುಚ್ಚಿದ" ಪ್ರಕರಣವಾಗಿದೆ ಎಂದು ಗುರುಗ್ರಾಮ್ ಪೊಲೀಸರು ಭಾನುವಾರ ತಿಳಿಸಿದ್ದಾರೆ. ದೇಶವನ್ನೇ ಬೆಚ್ಚಿಬೀಳಿಸಿದ ತಂದೆಯಿಂದಲೇ ಹತ್ಯೆಯಾದ ರಾಧಿಕಾ ಯಾದವ್‌ ತನಿಖೆಯನ್ನು ಪೊಲೀಸರು ಮುಕ್ತಾಯಗೊಳಿಸಿದ್ದಾರೆ. 

ಇದೀಗ ಆಕೆಯ ಸ್ನೇಹಿತರು ಾನ್‌ಲೈನ್‌ನಲ್ಲಿ ಪೋಸ್ಟ್ , ವಿಡಿಯೋ ಹಂಚಿಕೊಂಡು ತಮ್ಮ ಸ್ನೇಹಿತೆ ತನ್ನ ಮನೆಯಲ್ಲಿ ಅನುಭವಿಸಿದ ನೋವಿನ ಬಗ್ಗೆ ಹೇಳಿಕೊಂಡಿದ್ದಾರೆ. ಆದರೆ ಯಾರೊಬ್ಬರ ಹೇಳಿಕೆಗಳನ್ನು ಚಾರ್ಜ್‌ಶೀಟ್‌ಗೆ ಸೇರಿಸುತ್ತಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಫೋರೆನ್ಸಿಕ್ ಮತ್ತು ಸಾಕ್ಷ್ಯದ ಆಧಾರದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲು ಸಿದ್ಧತೆ ನಡೆಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ