ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆ ಸಕ್ರಿಯ
ಸೇನಾ ಮೂಲಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಗುಂಡಿಗೆ ಹತರಾದ ಭಯೋತ್ಪಾದಕರ ಮಾಹಿತಿಯನ್ನು ಹಂಚಿಕೊಂಡಿದೆ. ಈ ಮಾಹಿತಿಗಳ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಯಾವುದೇ ದೊಡ್ಡ ಒಳನುಸುಳುವಿಕೆ ನಡೆದಿಲ್ಲ. ಆದರೂ ಕಾಶ್ಮೀರದಲ್ಲಿ 71 ಪಾಕಿಸ್ತಾನಿ ಭಯೋತ್ಪಾದಕರು ಇದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಸ್ಥಳೀಯ ಭಯೋತ್ಪಾದಕರ ಶರಣಾಗತಿಗೆ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತದೆ. ಆದರೆ ಹೆಚ್ಚಿನ ಯಶಸ್ಸು ಇಲ್ಲಿ ಸಿಕ್ಕಿಲ್ಲ. 2018 ರಲ್ಲಿ ಒಬ್ಬ, 2020 ರಲ್ಲಿ 8, 2021 ರಲ್ಲಿ 2 ಮತ್ತು 2022 ರಲ್ಲಿ ಕೇವಲ ಇಬ್ಬರು ಭಯೋತ್ಪಾದಕರು ಶರಣಾಗಿದ್ದಾರೆ.