ಅಮೆರಿಕದಲ್ಲಿ 90 ಅಡಿ ಎತ್ತರ ಕಂಚಿನ ಹನುಮಾನ್ ಪ್ರತಿಮೆ ಅನಾವರಣ

Sampriya

ಗುರುವಾರ, 22 ಆಗಸ್ಟ್ 2024 (18:35 IST)
Photo Courtesy X
ನವದೆಹಲಿ: ಆಗಸ್ಟ್ 18 ರಂದರು ಅಮೆರಿಕದ ಟೆಕ್ಸಾಸ್‌ನಲ್ಲಿ ಭವ್ಯವಾದ 90ಅಡಿ ಎತ್ತರದ ಕಂಚಿನ ನಿರ್ಮಿಸಲಾದ ಹನುಮಾನ್ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು.

ವರದಿಗಳ ಪ್ರಕಾರ ಇದು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಮೂರನೇ ಅತಿ ಎತ್ತರದ ಪ್ರತಿಮೆಯಾಗಿದೆ. ಈ ಪ್ರತಿಮೆಗೆ 'ಸ್ಟ್ಯಾಚ್ಯೂ ಆಫ್ ಯೂನಿಯನ್' ಎಂದು ಹೆಸರಿಸಲಾಯಿತು ಮತ್ತು ಇದು ಶ್ರೀರಾಮ ಮತ್ತು ಸೀತೆಯನ್ನು ಪುನಃ ಒಂದಾಗಿಸುವಲ್ಲಿ ಭಗವಾನ್ ಹನುಮಂತನ ಪಾತ್ರವನ್ನು ಸ್ಮರಿಸುತ್ತದೆ.

ಟೆಕ್ಸಾಸ್‌ನ ಶುಗರ್ ಲ್ಯಾಂಡ್‌ನಲ್ಲಿರುವ ಶ್ರೀ ಅಷ್ಟಲಕ್ಷ್ಮಿ ದೇವಸ್ಥಾನದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಈ ಯೋಜನೆಯ ಹಿಂದಿನ ದಾರ್ಶನಿಕರು ಪರಮಪೂಜ್ಯ ಶ್ರೀ ಚಿನ್ನಜೀಯರ ಸ್ವಾಮೀಜಿ.

"ಉತ್ತರ ಅಮೆರಿಕಾದ ಅತಿ ಎತ್ತರದ ಕಂಚಿನ ಹನುಮಾನ್ ಪ್ರತಿಮೆ ಇದಾಗಿದೆ. ಪ್ರೀತಿ, ಶಾಂತಿ ಮತ್ತು ಭಕ್ತಿಯಿಂದ ತುಂಬಿದ ಜಗತ್ತನ್ನು ರಚಿಸುವು ಉದ್ದೇಶದಿಂದ ನಿರ್ಮಾಣ ಮಾಡಲಾಗಿದೆ. ಹನುಮಂತನನ್ನು ಸಾಮಾನ್ಯವಾಗಿ ದೇವರಿಗೆ ಸಮರ್ಪಿತವಾದ ದೇವಾಲಯಗಳಲ್ಲಿ ಪೂಜಿಸಲಾಗುತ್ತದೆ ಅಥವಾ ರಾಮನಿಗೆ ಸಮರ್ಪಿತವಾದ ದೇವಾಲಯಗಳಲ್ಲಿ ಪೂಜಿಸಲಾಗುತ್ತದೆ. ಹನುಮಂತನ ಕಥೆಯನ್ನು ದಶಕಗಳಿಂದ ವಿವಿಧ ಸಂಸ್ಕೃತಿಗಳು ಅಳವಡಿಸಿಕೊಂಡಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ