ಕೋಲ್ಕತ್ತಾ ವೈದ್ಯೆ ಮರ್ಡರ್ ಆರೋಪಿ ಸಂಜಯ್ ರಾಯ್ ಜೊತೆ ನಂಟಿದೆಯಾ ಎಂದು ಕೇಳಿದ್ದಕ್ಕೆ ಎದ್ನೋ ಬಿದ್ನೋ ಎಂದು ಓಡಿದ ಎಎಸ್ಐ (ವಿಡಿಯೋ)
ಆರೋಪಿ ಸಂಜಯ್ ರಾಯ್ ಜೊತೆ ನಿಕಟ ಸಂಪರ್ಕ ಹೊಂದಿರುವ ಆಪಾದನೆ ಎಎಸ್ಐ ಅನೂಪ್ ದತ್ತಾ ಮೇಲಿದೆ. ಈ ಸಂಬಂಧ ಅವರನ್ನು ಸಿಬಿಐ ತನಿಖೆಗೊಳಪಡಿಸಿದೆ. ತನಿಖೆಗೆ ಹಾಜರಾಗಲು ಬಂದಾಗ ಮಾಧ್ಯಮಗಳು ಅವರನ್ನು ಮುತ್ತಿಕೊಂಡಿದ್ದು, ನಿಮಗೂ ಸಂಜಯ್ ರಾಯ್ ಗೂ ಸಂಬಂಧವಿದೆಯಾ ಎಂದು ಕೇಳಿದ್ದಾರೆ.
ಆದರೆ ಪತ್ರಕರ್ತರು ತಮ್ಮ ಎದುರು ಮೈಕ್ ಹಿಡಿಯುತ್ತಿದ್ದಂತೇ ಅನೂಪ್ ದತ್ತಾ ಓಡಿ ಹೋಗಿದ್ದಾರೆ. ಓಡುತ್ತಲೇ ಕಚೇರಿಯೊಳಗೆ ಅಡಗಿಕೊಂಡಿದ್ದಾರೆ. ಸಂಜಯ್ ರಾಯ್ ಮೊದಲು ಕೋಲ್ಕತ್ತಾ ಪೊಲೀಸರ ವಿಪತ್ತು ದಳದ ಸ್ವಯಂ ಸೇವಕನಾಗಿದ್ದ. ಬಳಿಕ ಆತನನ್ನು ಪೊಲೀಸ್ ವೆಲ್ ಫೇರ್ ವಿಭಾಗಕ್ಕೆ ವರ್ಗಾಯಿಸಲಾಗಿತ್ತು.
ಹೀಗಾಗಿ ಸಂಜಯ್ ಯಾವಾಗಲೂ ತಾನು ಪೊಲೀಸ್ ಅಧಿಕಾರಿ ಎಂಬಂತೆ ಪೋಸ್ ಕೊಡುತ್ತಿದ್ದ. ಕೋಲ್ಕತ್ತಾ ಪೊಲೀಸ್ ಎಂಬ ಟ್ಯಾಗ್ ಇದ್ದ ಟಿ-ಶರ್ಟ್ ಧರಿಸುತ್ತಿದ್ದ. ಆತನ ಬೈಕ್ ನಲ್ಲೂ ಪೊಲೀಸ್ ಎಂದು ಹಾಕಿಸಿಕೊಂಡಿದ್ದ. ಇದರಿಂದಾಗಿ ಎಲ್ಲರೂ ಆತನನ್ನು ಪೊಲೀಸ್ ಅಧಿಕಾರಿ ಎಂದುಕೊಂಡಿದ್ದರು. ಈ ಕಾರಣಕ್ಕೆ ಆರ್ ಜಿ ಕರ್ ಆಸ್ಪತ್ರೆಯಲ್ಲಿ ಎಲ್ಲಿ ಬೇಕೆಂದರಲ್ಲಿ ಓಡಾಡುತ್ತಿದ್ದ.