ಅಂತ್ಯಸಂಸ್ಕಾರಕ್ಕೆ ಅವಕಾಶ ಕೋರಿದ್ದ ಅರ್ಜಿ ವಜಾ

ಮಂಗಳವಾರ, 13 ಸೆಪ್ಟಂಬರ್ 2022 (15:57 IST)
ನವದೆಹಲಿ : ಎನ್ಕೌಂಟರ್ನಲ್ಲಿ ಮೃತಪಟ್ಟಿದ್ದ ಉಗ್ರನ ಅಂತಿಮ ವಿಧಿವಿಧಾನಗಳನ್ನು ನಿರ್ವಹಿಸಲು ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲು ಕೋರಿ ಸುಪ್ರೀಂಕೋರ್ಟ್ಗೆ ಉಗ್ರನ ತಂದೆ ಸಲ್ಲಿದ್ದ ಅರ್ಜಿಯನ್ನು ವಜಾಗೊಳಿಸಲಾಗಿದೆ.
 
ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರದ ಹೈದರ್ಪೋರಾದಲ್ಲಿ ಭದ್ರತಾಪಡೆಯಿಂದ ನಡೆದ ಎನ್ಕೌಂಟರ್ನಲ್ಲಿ ಅಮಿರ್ ಮಗ್ರೆ ಹತನಾಗಿದ್ದ. ಆದರೆ ಆತ ನಿರಪರಾಧಿಯಾಗಿದ್ದ ಹಾಗೂ ಆತನಿಗೆ ಯೋಗ್ಯ ಸಮಾಧಿಯನ್ನು ಮಾಡಿಲ್ಲ.

ಈ ಹಿನ್ನೆಲೆಯಲ್ಲಿ ಔಪಚಾರಿಕವಾಗಿ ಶವವನ್ನು ಹೊರತೆಗೆದು ಅಂತ್ಯಸಂಸ್ಕಾರ ಮಾಡಲು ಕುಟುಂಬಸ್ಥರಿಗೆ ಅವಕಾಶ ನೀಡಬೇಕು ಎಂದು ಅಮಿರ್ ತಂದೆ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದರು.

ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ಜೆ ಬಿಪರ್ದಿವಾಲಾ ಅವರ ಪೀಠವು ಈ ಅರ್ಜಿಯನ್ನು ವಜಾಗೊಳಿಸಿದೆ. ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಕ್ ಹೈಕೋರ್ಟ್ ನೀಡಿದ ತೀರ್ಪು ನ್ಯಾಯುತವಾಗಿದೆ. ಅದನ್ನೇ ಅನುಸರಿಸಲು ಅಮಿರ್ ತಂದೆ ಮೊಹಮ್ಮದ್ ಲಿತೀಫ್ ಮ್ಯಾಗ್ರಿಗೆ ಪೀಠ ತಿಳಿಸಿದೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ