ಜೆಎನ್ ಯು ಉಪಕುಲಪತಿ ರಾಜೀನಾಮೆ ನೀಡಬೇಕು ಎಂದ ಬಿಜೆಪಿಯ ಹಿರಿಯನಾಯಕ
ಶುಕ್ರವಾರ, 10 ಜನವರಿ 2020 (06:37 IST)
ನವದೆಹಲಿ : ಜೆಎನ್ ಯು ವಿದ್ಯಾರ್ಥಿಗಳು ಬೀದಿಗಿಳಿಯಲು ವಿವಿಯ ಉಪಕುಲಪತಿ ಎಂ ಜಗದೀಶ್ ಕುಮಾರ್ ನೇರ ಹೊಣೆ, ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಬಿಜೆಪಿಯ ಹಿರಿಯನಾಯಕ ಮುರಳಿ ಮನೋಹರ್ ಜೋಶಿ ಆಗ್ರಹಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು , ‘ಪೀಸ್ ಹೈಕ್ ಬಳಿಕ ಸರ್ಕಾರವಿತ್ತ ಪ್ರಸ್ತಾವ ಅನುಷ್ಠಾನಗೊಳಿಸದಿರಲು ಉಪಕುಲಪತಿಗಳ ಅಸಡ್ಡೆ ತೋರಿದ್ದಾರೆ. ಎಂ ಜಗದೀಶ್ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ನಿಶ್ಚಲವಾಗಿರುವುದು ಆಘಾತಕಾರಿ ವಿಷಯ. ಅವರ ವರ್ತನೆ ನಾಚಿಕೆಗೇಡಿನಿಂದ ಕೂಡಿದೆ. ಇವರು ವಿವಿಯ ಉಪಕುಲಪತಿಗಳಾಗಿ ಮುಂದುವರಿಯಲು ಅರ್ಹರಲ್ಲ. ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಇವರು ಉಪಕುಲಪತಿಗಳಾಗಿ ಮುಂದುವರಿಯಲು ಅನುಮತಿ ನೀಡಬಾರದು’ ಎಂದು ತಿಳಿಸಿದ್ದಾರೆ.