ನಾಯಿಮರಿಯನ್ನು ಮಹಡಿಯಿಂದ ಎಸೆದ ಬಾಲಕ
ನೋಯ್ಡಾ : ಬಾಲಕ ನಾಯಿಮರಿಯೊಂದನ್ನು ಮಹಡಿಯಿಂದ ಅಸಹಜ ಚೇಷ್ಟೆಯಲ್ಲಿ ತೊಡಗಿರುವ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ವತಃ ಮಗುವಿನ ತಂದೆಯೇ ಈ ವಿಡಿಯೋವನ್ನು ತನ್ನ ಮೊಬೈಲ್ ನಿಂದ ರೆಕಾರ್ಡ್ ಮಾಡಿದ್ದಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ವಿಕೃತಿಯ ಪರಾಕಾಷ್ಠೆ ಮರೆದಿದ್ದಾನೆ. ದೇಶಾದ್ಯಂತ ಪ್ರಾಣಿಪ್ರಿಯರಿಂದ ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಬಾಲಕನ ತಂದೆಯ ವಿರುದ್ದ ಪೀಪಲ್ ಫಾರ್ ಅನಿಮಲ್ ಸಂಘಟನೆ ಎಫ್‌ಐಆರ್ ದಾಖಲಿಸಿದೆ.
ಎರಡು ದಿನಗಳ ಹಿಂದೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಘಟನೆಯಲ್ಲಿ ನಾಯಿಮರಿ ಮೃತಪಟ್ಟಿದೆ.ಬಾಲಕನನ್ನು ಬಾಲಾಪರಾಧಿ ಎಂದು ಪರಿಗಣಿಸಬೇಕು. ಹಾಗೂ ಮಗುವಿನ ಮಾನಸಿಕ ಸ್ಥಿತಿಯ ಬಗ್ಗೆ ಚಿಕಿತ್ಸೆ ನೀಡುವಂತೆ ನಿರ್ದೇಶಿಸಬೇಕೆಂದು ದೂರಿನಲ್ಲಿ ಆಗ್ರಹಿಸಲಾಗಿದೆ.