ಆಸ್ಪತ್ರೆ ವೈದ್ಯರ ಎಡವಟ್ಟು,ನರಳಿ ನರಳಿ ಪ್ರಾಣ ಬಿಟ್ಟ ಬಾಲಕ

geetha

ಭಾನುವಾರ, 14 ಜನವರಿ 2024 (17:01 IST)
ಬೆಂಗಳೂರು-ಆಸ್ಪತ್ರೆ ವೈದ್ಯರ ಎಡವಟ್ಟಿಗೆ ಬಾಲಕ ನರಳಿ ನರಳಿ ಪ್ರಾಣ ಬಿಟ್ಟಿರುವ ಘಟನೆ ನಗರದಲ್ಲಿ ನಡೆದಿದೆ.ನಿರಂತರ 6 ವರ್ಷ ಕೋಮಾದಲ್ಲಿದ್ದು ಯುವಕ ನರಕಯಾತನೆ ಅನುಭವಿಸಿದ್ದಾನೆ.6 ವರ್ಷದ ಬಳಿಕ  ಬಾಲಕ ವಿಘ್ನೇಶ್(20)ಪ್ರಾಷ ಬಿಟ್ಟಿದ್ದಾನೆ.ಹರ್ನಿಯಾ ಚಿಕಿತ್ಸೆಗೆಂದು ಸುಬ್ರಹ್ಮಣ್ಯನಗರದಲ್ಲಿರುವ ಖಾಸಗಿ ಆಸ್ಪತ್ರೆಗೆ ತೆರಳಿದ್ದ.ಏಪ್ರಿಲ್ 4 ,2017 ರಲ್ಲಿ ಬಾಲಕ ವಿಘ್ನೇಶ್ ಆಸ್ಪತ್ರೆಗೆ ದಾಖಲಾಗಿದ್ದ .ಶಸ್ತ್ರ ಚಿಕಿತ್ಸೆ ಸಮಯದಲ್ಲಿ ಮೂರು ಬಾರಿ ಅನಸ್ತೇಷಿಯ ವೈದ್ಯರು ನೀಡಿದ್ದರು.ಅನಸ್ತೇಷಿಯ ನೀಡಿದಾಗಿನಿಂದ ಪ್ರಜ್ಙೆ ವಿಘ್ನೇಶ್ ಕಳೆದುಕೊಂಡಿದ್ದ .ಘಟನೆ ಸಂಬಂಧ ಬನಶಂಕರಿ ಪೊಲೀಸರಿಗೆ ಕುಟುಂಬಸ್ಥರು  ದೂರು ನೀಡಿದ್ದರು.ಅದೇ ಕ್ಷಣದಿಂದ ಕೋಮಾಗೆ ಬಾಲಕ ಜಾರಿದ್ದ.ಈ ವೇಳೆ ಚಿಕಿತ್ಸೆ ವೆಚ್ಚ ಭರಿಸೋದಾಗಿ ವೈದ್ಯರು ಹೇಳಿದ್ದರು.
 
ಚಿಕಿತ್ಸೆಗೆಂದು‌ ಕುಟುಂಬಸ್ಥರು 19 ಲಕ್ಷ ಖರ್ಚು ಮಾಡಿದ್ದರು.ಐದು ಲಕ್ಷ ನೀಡಿ ಆಸ್ಪತ್ರೆ ಆಡಳಿತ ಮಂಡಳಿ ಕೈ ತೊಳೆದುಕೊಂಡಿದೆ.ಉಳಿದ ಚಿಕಿತ್ಸೆ ವೆಚ್ಚ ಕೂಡ ನೀಡದೆ ಆಸ್ಪತ್ರೆಯವರು ಬೆದರಿಕೆ ಹಾಕಿದ್ದಾರೆ.6 ವರ್ಷ ಕೋಮಾದಲ್ಲಿದ್ದ 2024 ಜನವರಿ 3 ರಂದು ಯುವಕ ಸಾವಾನಾಪ್ಪಿದ್ದು,ಆಸ್ಪತ್ರೆ ವೈದ್ಯರ ಯಡವಟ್ಟು ಸಂಬಂಧ ಮತ್ತೆ ಬನಶಂಕರಿ ಪೊಲೀಸ್ ಠಾಣೆಗೆ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ.ಇದೀಗ ಬನಶಂಕರಿ ಪೊಲೀಸ್ ನವರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ