ತಾಳಿಕಟ್ಟೋ ಕ್ಷಣದಲ್ಲೇ ಹೃದಯಾಘಾತದಿಂದ ವಧು ಸಾವು!
ಈ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ ಮದುವೆ ವೇದಿಕೆಯಲ್ಲೇ 21 ವರ್ಷದ ಯುವತಿಯೊಬ್ಬಳು ತಾಳಿಕಟ್ಟುವ ಕೊನೆಯ ಕ್ಷಣದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಲಕ್ನೋನ ಮಲಿಹಾಬಾದ್ ನಗರ ವ್ಯಾಪ್ತಿಯ ಭದ್ವಾನ ಗ್ರಾಮದಲ್ಲಿ ಡಿಸೆಂಬರ್ 3ರಂದು ಶಿವಾಂಗಿ ಶರ್ಮಾ ವಿವಾಹ ಇತ್ತು. ಭಾವಿ ಪತಿಯೊಂದಿಗೆ ವೇದಿಕೆ ಮೇಲೆ ಶಿವಾಂಗಿ ಸಂತಸದಿಂದ ಕಾಲ ಕಳೆಯುತ್ತಿದ್ದರು.
ಆಹಾರ ಬದಲಾಯಿಸಿದ ಬಳಿಕ ಶಿವಾಂಗಿ ಕುಸಿದಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಷ್ಟೊತ್ತಿಗಾಗಲೇ ಆಕೆ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ. ಇದಕ್ಕೆ ಹಠಾತ್ ಹೃದಯಾಘಾತವೇ ಕಾರಣ ಎಂದು ವೈದ್ಯರು ದೃಢಪಡಿಸಿದ್ದಾರೆ.