ಕೂದಲು ಕಸಿ ಮಾಡಿಸುವ ಮುನ್ನ ಎಚ್ಚರ!

ಸೋಮವಾರ, 5 ಡಿಸೆಂಬರ್ 2022 (11:17 IST)
ನವದೆಹಲಿ : ಬೋಳು ತಲೆಯಿದ್ದವರು ಕೂದಲನ್ನು ಬೆಳೆಸಲು ಔಷಧಿಗಳ ಮೊರೆ ಹೋಗುವುದು ಸಾಮಾನ್ಯ. ಇತ್ತೀಚಿನ ದಿನಗಳಲ್ಲಿ ಜನರು ಕೂದಲ ಕಸಿ ಮಾಡಿಸುವಲ್ಲಿಗೆ ವಾಲುತ್ತಿದ್ದಾರೆ.

ಆದರೆ ಕೂದಲ ಕಸಿ ಮಾಡಿಸಿಕೊಳ್ಳಲು ಹೋದವರೊಬ್ಬರು ವೈದ್ಯರ ಯಡವಟ್ಟಿನಿಂದ ಜೀವವನ್ನೇ ಕಳೆದುಕೊಂಡಿರುವ ಆಘಾತಕಾರಿ ಘಟನೆಯೊಂದು ನಡೆದಿದೆ.

ದೆಹಲಿಯ ವ್ಯಕ್ತಿ ಅಥರ್ ರಶೀದ್ (30) ಕೂದಲ ಕಸಿ ಮಾಡಿಸಿಕೊಳ್ಳಲು ಕ್ಲಿನಿಕ್ಗೆ ಹೋಗಿದ್ದರು. ಆದರೆ ಕೂದಲ ಕಸಿ ಮಾಡಿಸಿಕೊಂಡ ಬಳಿಕ ಅವರು ತೀವ್ರವಾದ ನೋವಿನಿಂದ ಬಳಲುತ್ತಿದ್ದು, ಬಹು ಅಂಗಾಂಗ ವೈಫಲ್ಯ ಉಂಟಾಗಿ ಸಾವನ್ನಪ್ಪಿದ್ದಾರೆ.

ರಶೀದ್ ತಮ್ಮ ಮನೆಯಲ್ಲಿ ಒಬ್ಬರೇ ದುಡಿಯುತ್ತಿದ್ದ ವ್ಯಕ್ತಿಯಾಗಿದ್ದು, ತಮ್ಮ ತಾಯಿ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ. ಕೂದಲ ಶಸ್ತ್ರಚಿಕಿತ್ಸೆಯ ಬಳಿಕ ನನ್ನ ಮಗ ತುಂಬಾ ನೋವಿನಿಂದ ಬಳಲುತ್ತಿದ್ದ ಆತನ ಮೈಮೇಲೆ ಗುಳ್ಳೆಗಳಾಗಿದ್ದವು ಎಂದು ರಶೀದ್ ತಾಯಿ ಆಸಿಯಾ ಬೇಗಂ ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ