ಉದ್ಯೋಗಿಗಳಿಗೆ ಫಿಟ್ನೆಸ್ ಚ್ಯಾಲೆಂಜ್ ಹಾಕಿದ ಸಿಇಒ
ಹೌದು, ಆನ್ಲೈನ್ ಬ್ರೋಕರೇಜ್ ಕಂಪನಿ Zerodha ತನ್ನ ಉದ್ಯೋಗಿಗಳಿಗೆ ಹೊಸ ಫಿಟ್ನೆಸ್ ಸವಾಲನ್ನು ನೀಡಿದೆ. ಕಂಪನಿಯ ಸಿಇಒ ನಿತಿನ್ ಕಾಮತ್, ಈ ಸವಾಲನ್ನು ಪೂರ್ಣಗೊಳಿಸುವುದರಿಂದ ಉದ್ಯೋಗಿಗಳಿಗೆ ಪ್ರೋತ್ಸಾಹವನ್ನು ನೀಡಲಾಗುತ್ತದೆ. ಮಾತ್ರವಲ್ಲದೇ ಒಬ್ಬ ಅದೃಷ್ಟಶಾಲಿ ಉದ್ಯೋಗಿ 10 ಲಕ್ಷ ರೂ. ಬಹುಮಾನವನ್ನು ಗೆಲ್ಲಬಹುದು ಎಂದಿದ್ದಾರೆ.
ತಮ್ಮ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುವ ಸಂದರ್ಭದಲ್ಲಿ ಹೆಚ್ಚು ಸಕ್ರಿಯರಾಗಿರುವಂತೆ ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ನಮ್ಮ ಸಂಸ್ಥೆಯ ಹೆಚ್ಚಿನ ಉದ್ಯೋಗಿಗಳು ವರ್ಕ್ ಫ್ರಂ ಹೋಮ್ ಮಾಡುತ್ತಿದ್ದು, ಇದರಿಂದ ಅವರು ಹೆಚ್ಚು ಸಕ್ರಿಯರಾಗದೇ ಇರಲು ಕಾರಣವಾಗಿದೆ.