ಪುಟಿನ್ ‘ಯುದ್ಧಾಪರಾಧಿ’ : ಜೋ ಬೈಡನ್

ಗುರುವಾರ, 17 ಮಾರ್ಚ್ 2022 (12:42 IST)
ವಾಷಿಂಗ್ಟನ್ : ಉಕ್ರೇನ್-ರಷ್ಯಾ ನಡುವೆ ಯುದ್ಧ ತೀವ್ರಗತಿಯಲ್ಲಿ ಸಾಗುತ್ತಿದೆ. ಈ ನಡುವೆ ರಷ್ಯಾ ಸೇನೆ 1,500ಕ್ಕೂ ಹೆಚ್ಚು ಜನರಿಗೆ ಆಶ್ರಯ ಕೊಟ್ಟಿದ್ದ ಥಿಯೇಟರ್ ಮೇಲೆ ಬಾಂಬ್ ದಾಳಿ ಮಾಡಿದೆ.

ಈ ಹಿನ್ನೆಲೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ರಷ್ಯಾ ಅಧ್ಯಕ್ಷ ಪುಟಿನ್ನನ್ನು ‘ಯುದ್ಧಾಪರಾಧಿ’ ಎಂದು ಕರೆದಿದ್ದಾರೆ. ಶ್ವೇತಾಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಷ್ಯಾ – ಉಕ್ರೇನ್ ಯುದ್ಧ ಕುರಿತು ಮಾತನಾಡಿದ ಬೈಡನ್, ಉಕ್ರೇನ್ನಲ್ಲಿ ರಷ್ಯಾದ ನಾಯಕನ ದಾಳಿಯು ಹೆಚ್ಚು ನಾಗರಿಕರನ್ನು ಬಲಿತೆಗೆದುಕೊಂಡಿತು.

‘ನೂರಾರು’ ಜನರು ಆಶ್ರಯ ಪಡೆದಿದ್ದ ಥಿಯೇಟರ್ ಮೇಲೆ ಬಾಂಬ್ ದಾಳಿ ಮಾಡಿ ಧ್ವಂಸಗೊಳಿಸಿದ್ದಾರೆ. ಇದು ಅಮಾನವೀಯವಾಗಿದೆ. ಈ ಮೂಲಕ ಪುಟಿನ್ ‘ಯುದ್ಧ ಅಪರಾಧಿ’ ಯಾಗಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. 

ಉಕ್ರೇನ್ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯು ಯುಎಸ್ ಕಾಂಗ್ರೆಸ್ ಮತ್ತು ಅಧ್ಯಕ್ಷರಿಗೆ ಸಹಾಯಕ್ಕಾಗಿ ಒಂದು ದೊಡ್ಡ ಮನವಿಯನ್ನು ಮಾಡಿದ್ದರು. ಅದಕ್ಕೆ ಬೈಡನ್, ರಷ್ಯಾದ ಆಕ್ರಮಣಕಾರಿ ಸೈನ್ಯದ ವಿರುದ್ಧ ಹೋರಾಡಲು 1 ಬಿಲಿಯನ್ ಹೊಸ ಶಸ್ತ್ರಾಸ್ತ್ರಗಳನ್ನು ನೀಡುವುದಾಗಿ ಪ್ರತಿಕ್ರಿಯಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ