ಖಿನ್ನತೆಗೊಳಗಾದ ವ್ಯಕ್ತಿ ಮಗನನ್ನು ಕೊಂದು ಮೃತದೇಹದೊಂದಿಗೆ ಮಲಗಿದ

ಸೋಮವಾರ, 30 ನವೆಂಬರ್ 2020 (10:45 IST)
ಕಾನ್ಪುರ : ಖಿನ್ನತೆಗೊಳಗಾದ 43 ವರ್ಷದ ವ್ಯಕ್ತಿ ತನ್ನ 7 ವರ್ಷದ ಮಗನನ್ನು ಕೊಲೆ ಮಾಡಿ ಮೃತದೇಹದೊಂದಿಗೆ ಮಲಗಿದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

ಕೊರೊನಾ ಲಾಕ್ ಡೌನ್ ವೇಳೆ ಕೆಲಸ ಕಳೆದುಕೊಂಡ ಆರೋಪಿ ಖಿನ್ನತೆ ಒಳಗಾದ ವ್ಯಕ್ತಿ ತನ್ನ 7 ವರ್ಷದ ಮಗನ ಕತ್ತು ಹಿಸುಕಿ ಕೊಲೆ ಮಾಡಿ ಮೃತದೇಹದೊಂದಿಗೆ ಮಲಗಿದ್ದಾನೆ. ಬಳಿಕ ಪತ್ನಿ ಬಂದು ಎಚ್ಚರಿಸಿದಾಗ ತಾನು ಮಗನನ್ನು ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ. ತಕ್ಷಣ ಆಕೆ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾಳೆ.

ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪತ್ನಿ  ಪತಿಯ ವಿರುದ್ಧ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ