ಸಾಲ ತೀರಿಸಲು ಹೆತ್ತ ಮಗುವನ್ನೇ ಮಾರಿದ ತಂದೆ

ಗುರುವಾರ, 26 ನವೆಂಬರ್ 2020 (12:56 IST)
ತಮಿಳುನಾಡು : ಸಾಲ ತೀರಿಸಲು ವ್ಯಕ್ತಿಯೊಬ್ಬ ತನ್ನ 6 ತಿಂಗಳ ಮಗನನ್ನು 1ಲಕ್ಷ ರೂ.ಗೆ ಮಾರಾಟ ಮಾಢಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಸೌಕತ್ ಅಲಿ  ಮಗನನ್ನೇ ಮಾರಾಟ ಮಾಡಿದ ತಂದೆ. ಈತನ ಪತ್ನಿ 6 ತಿಂಗಳ ಹಿಂದೆ ಗಂಡುಮಗುವಿಗೆ ಜನ್ಮ ನೀಡಿದ್ದಾಳೆ. ಲಾಕ್ ಡೌನ್ ನಿಂದ ಕೆಲಸವಿಲ್ಲದ ಕಾರಣ ಈತ ತನ್ನ ಸ್ನೇಹಿತನ ಬಳಿ ಸಾಲ ಪಡೆದಿದ್ದ. ಆ ಸಾಲವನ್ನು ತೀರಿಸಲು ಸ್ನೇಹಿತ ಮಗು ಮಾರಾಟ ಮಾಡುವಂತೆ ಸೌಕತ್ ಅಲಿಯ ಮನವೊಲಿಸಿದ.  ಹಾಗಾಗಿ ಸೌಕತ್ ಅಲಿ ತನ್ನ ಮಗುವನ್ನು ಮಕ್ಕಳಿಲ್ಲದ ದಂಪತಿಗೆ 1ಲಕ್ಷ ರೂ.ಗೆ ಮಾರಾಟ ಮಾಡಿದ್ದಾನೆ.

ಈ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿದುಬಂದ ಹಿನ್ನಲೆಯಲ್ಲಿ ಮಗು ಮಾರಾಟ ಮಾಡಿದ ತಂದೆ ಮತ್ತು ಆತನ ಸ್ನೇಹಿತನ್ನು ಹಾಗೂ ಮಗುವನ್ನು ಪಡೆದವನನ್ನು ಮೂವರನ್ನು ಬಂಧಿಸಿ ಮಗುವನ್ನು ತಾಯಿಯ ಮಡಲಿಗೆ ಸೇರಿಸಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ