ಶಿಕ್ಷಣ ಸಂಸ್ಥೆ ಸೂಚಿಸಿರುವ ಡ್ರೆಸ್ ಕೋಡ್ ಅನುಸರಿಸಬೇಕು: ಜೋಶಿ

ಗುರುವಾರ, 10 ಫೆಬ್ರವರಿ 2022 (09:54 IST)
ನವದೆಹಲಿ : ಕೆಲವು ದಿನಗಳಿಂದ ಕರ್ನಾಟಕದಲ್ಲಿ ನಡೆಯುತ್ತಿರುವ ‘ಹಿಜಬ್’ ವಿವಾದ ನಡುವೆ,
 
ರಾಜ್ಯದ ಎಲ್ಲಾ ವಿದ್ಯಾರ್ಥಿಗಳು ಶಾಲೆಗಳು ಅಥವಾ ಆಡಳಿತ ಮಂಡಳಿಯು ಸೂಚಿಸುವ ಡ್ರೆಸ್ ಕೋಡ್ ಮಾತ್ರ ಅನುಸರಿಸಬೇಕು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

ಎಲ್ಲಾ ವಿದ್ಯಾರ್ಥಿಗಳು ಶಾಲೆಗಳು ಅಥವಾ ಆಡಳಿತ ಮಂಡಳಿ ಸೂಚಿಸಿದ ಡ್ರೆಸ್ ಕೋಡ್ ಅನುಸರಿಸಬೇಕು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕು. ಇನ್ನೂ ಈ ವಿಚಾರವಾಗಿ ವಿದ್ಯಾರ್ಥಿಗಳನ್ನು ಪ್ರಚೋದಿಸುತ್ತಿರುವವರು ಯಾರು ಎಂಬುದನ್ನು ಕಂಡು ಹಿಡಿಯಬೇಕು ಎಂದಿದ್ದಾರೆ. 

ಇದರಿಂದ ಪ್ರತಿಭಟನೆಯ ಕಾವು ಹೆಚ್ಚಾದ್ದರಿಂದ ಉನ್ನತ ಶಿಕ್ಷಣ ಇಲಾಖೆಯ ಅಧೀನದಲ್ಲಿರುವ ಎಲ್ಲಾ ವಿಶ್ವವಿದ್ಯಾಲಯಗಳು, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ (ಡಿಸಿಟಿಇ) ಅಡಿಯಲ್ಲಿರುವ ಕಾಲೇಜುಗಳಿಗೆ ಫೆಬ್ರವರಿ 9 ರಿಂದ 11 ರವರೆಗೆ ಮೂರು ದಿನಗಳ ರಜೆ ಘೋಷಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ