ಕಾಮ ತೃಷೆಯನ್ನು ನೀಗಿಸಿಕೊಳ್ಳಲು ಮೂವರು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಎಸಗಿದ ನೀಚ ತಂದೆ
ಬುಧವಾರ, 12 ಸೆಪ್ಟಂಬರ್ 2018 (06:55 IST)
ಗುಜರಾತ್ : ಕಾಮುಕರ ಕೈಯಿಂದ ತನ್ನ ಹೆಣ್ಣುಮಕ್ಕಳನ್ನು ರಕ್ಷಿಸಬೇಕಾದ ತಂದೆಯೇ ತನ್ನ ಮೂವರು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಎಸಗಿದ ಹೀನ ಕೃತ್ಯ ಗುಜರಾತಿನಲ್ಲಿ ನಡೆದಿದೆ.
ಆರೋಪಿ ತಂದೆಗೆ 40 ವರ್ಷ ವಯಸ್ಸಾಗಿದ್ದು, ಇತನಿಗೆ ಒಬ್ಬ ಮಗ ಹಾಗೂ ಮೂವರು ಹೆಣ್ಣು ಮಕ್ಕಳಿದ್ದಾರೆ. ಇತನ ಪತ್ನಿ 2008 ರಲ್ಲಿ ಮೃತಪಟ್ಟಿದ್ದಾಳೆ. ಮಕ್ಕಳು ಜುನಾಗಡ್ ನಲ್ಲಿ ವಸತಿ ಶಾಲೆಯಲ್ಲಿ ಇದ್ದು, ವ್ಯಾಸಂಗ ಮಾಡುತ್ತಿದ್ದರು. ಇತ ತನ್ನ ಕಾಮ ತೃಷೆಯನ್ನು ನೀಗಿಸಿಕೊಳ್ಳಲು ಶಾಲೆ ರಜೆ ಇದ್ದಾಗ ತನ್ನ ಹೆಣ್ಣುಮಕ್ಕಳನ್ನು ಕರೆದುಕೊಂಡು ಬಂದು ಅತ್ಯಾಚಾರ ಎಸಗುತ್ತಿದ್ದನು. ಇದೇ ರೀತಿ ಸತತ ಐದು ವರ್ಷಗಳಿಂದ ಈ ಹೀನ ಕೃತ್ಯವನ್ನು ಮಾಡುತ್ತಿದ್ದಾನೆ ಎಂದು ಪೊಲೀಸ್ ಅಧಿಕಾರಿಕಾರಿಯೊಬ್ಬರು ಹೇಳಿದ್ದಾರೆ.
ಅಷ್ಟೇ ಅಲ್ಲದೇ ಈ ವಿಚಾರವನ್ನು ಯಾರಿಗೂ ಹೇಳಬಾರದು ಎಂದು ಬೆದರಿಕೆ ಒಡ್ಡಿದ್ದಾನೆ. ಆದ್ದರಿಂದ ಐದು ವರ್ಷದಿಂದ ಈ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ. ಆದರೆ ಇದೀಗ ಮೂವರು ಅಕ್ಕತಂಗಿಯರು ಸೇರಿ ನಿರ್ಧಾರ ಮಾಡಿ ಕಮ್ಲಾಬಾಗ್ ಪೊಲೀಸ್ ಠಾಣೆಗೆ ಬಂದು ಈ ಬಗ್ಗೆ ದೂರು ನೀಡಿದ್ದಾರೆ. ಗುಜರಾತಿನ ಪೋರಬಂದರ್ ನಗರದ ಪೊಲೀಸರು ಈಗ ಆರೋಪಿ ತಂದೆಯನ್ನು ಬಂಧಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.