ಮಹಿಳಾ ಪೇದೆಯ ಮೇಲೆ ಪೊಲೀಸ್ ಠಾಣೆಯಲ್ಲಿಯೇ ಅತ್ಯಾಚಾರ ಎಸಗಿದ ಪೊಲೀಸ್ ಪೇದೆ

ಮಂಗಳವಾರ, 11 ಸೆಪ್ಟಂಬರ್ 2018 (07:42 IST)
ಚಂಡೀಗಢ : ಮಹಿಳಾ ಪೊಲೀಸ್​ ಮುಖ್ಯ ಪೇದೆ ಮೇಲೆ ಪೇದೆ​ ಹಾಗೂ ಆತನ ಸಹೋದರ ಸೇರಿ ಪೊಲೀಸ್​ ಠಾಣೆಯೊಳಗೆ ಅತ್ಯಾಚಾರಗೈದಿರುವ ಘಟನೆ ಚಂಡೀಗಢದಲ್ಲಿ ನಡೆದಿದೆ.


ಪೊಲೀಸ್​ ಪೇದೆ​ ಜೋಗಿಂದರ್​ ಎಂಬಾತ 2017ರಲ್ಲಿ ತನ್ನ ಸಹೋದರನಿಗೆ ಮಹಿಳಾ ಪೇದೆಯನ್ನು ಪರಿಚಯಿಸಿದ್ದು, ಆ ವೇಳೆ ನನ್ನ ಮೇಲೆ ಆತ ಅತ್ಯಾಚಾರಗೈದು, ಹಣಕ್ಕಾಗಿ ಬ್ಲಾಕ್​ಮೆಲ್​ ಮಾಡಿದ್ದಾನೆ. ಆದರೆ ಇದೀಗ ಮತ್ತೆ ತನ್ನ ಮೇಲೆ ಇಬ್ಬರು ಸೇರಿ ಪೊಲೀಸ್​ ಠಾಣೆಯಲ್ಲಿ ಅತ್ಯಾಚಾರಗೈದಿರುವುದಾಗಿ ಆಕೆ ತಿಳಿಸಿದ್ದಾಳೆ.


 ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಪೊಲೀಸ್ ಪೇದೆ ಹರಿಯಾಣ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಪೇದೆ ಹಾಗೂ ಆತನ ಸಹೋದರ ಮೇಲೆ ದೂರು ದಾಖಲಿಸಿದ್ದಾರೆ. ಆದರೆ ಈ ಬಗ್ಗೆ ತಮ್ಮ ಮೇಲೆ ಬಂದ ಆರೋಪವನ್ನು ಪೇದೆ ಅಲ್ಲಗೆಳೆದಿದ್ದಾನೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ