ಎರಡು ಅವಧಿಯ ಸಾಧನೆಗಳ ಬುತ್ತಿ ಬಿಚ್ಚಿಟ್ಟ ವಿತ್ತಸಚಿವೆ

geetha

ಶುಕ್ರವಾರ, 2 ಫೆಬ್ರವರಿ 2024 (16:00 IST)
ನವದೆಹಲಿ :  ಸುಧೀರ್ಘ ಭಾಷಣದ ಮೂಲಕ ಸರ್ಕಾರದ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ವಿತ್ತೀಯ, ಔದ್ಯೋಗಿಕ ಕ್ಷೇತ್ರಗಳಲ್ಲಿ ಸಾಧನೆಗಳನ್ನು ತೆರತೆದಿಟ್ಟ ವಿತ್ತಸಚಿವೆ ನಿರ್ಮಲಾ ಸೀತಾರಾಮನ್‌, ಸರ್ಕಾರದ ಧ್ಯೇಯವಾಕ್ಯದಂತೆ ಸಬ್‌ ಕಾ ಸಾಥ್‌, ಸಬ್‌ ಕಾ ವಿಶ್ವಾಸ್‌ ಎಂಬುದನ್ನು ಅನುಷ್ಠಾನಗೊಳಿಸಿದ್ದೇವೆ ಎಂದರು. ಲೋಕಸಭೆ ಹಾಗೂ ರಾಜ್ಯಸಭೆಯನ್ನುದ್ದೇಶಿಸಿ ಮಾತನಾಡಿದ ನಿರ್ಮಲಾ ಸೀತಾರಾಮನ್‌, ಕಳೆದ ಎರಡು ಅವಧಿಯಲ್ಲಿ ಎನ್‌ಡಿಎ ಒಕ್ಕೂಟದ ಸರ್ಕಾರದ ಸಾಧನೆಗಳನ್ನು ಬಣ್ಣಿಸಿದರು. 
 
ಶಿಕ್ಷಣ ಕ್ಷೇತ್ರದಲ್ಲಿ 7 ಐಐಟಿ, 16 ಐಐಎಂಎಎಸ್‌  ಮತ್ತು 309 ಕ್ಕೂ ಹೆಚ್ಚು ವಿಶ್ವ ವಿದ್ಯಾಲಯಗಳನ್ನು ಸ್ಥಾಪಿಸಲಾಗಿದೆ. 3 ಸಾವಿರ ಹೊಸ ಐಟಿಐ ಗಳನ್ನು ನಿರ್ಮಿಸಲಾಗಿದೆ. ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಳವಾಗಿದೆ. 
ಹೊಸ ಉದ್ಯಮ ಸ್ಥಾಪಿಸುವ ಯುವಜನತೆಗೆ ಮುದ್ರಾ ಯೋಜನೆಯ ಮೂಲಕ ಆರ್ಥಿಕ ನೆರವು ನೀಡಲಾಗಿದೆ. ಯುವ ಜನತೆ ಮತ್ತು ಮಹಿಳಾ ಉದ್ಯಮಿಗಳು ಹೆಚ್ಚಿನಂಶ ಇದರ ಫಲಾನುಭವಿಗಳಾಗಿದ್ದಾರೆ. ಕ್ರೆಡಿಟ್‌ ಗ್ಯಾರೆಂಟಿ ಯೋಜನೆಯಡಿಯಲ್ಲಿಯು ಯುವ ಜನರಿಗೆ ಆರ್ಥಿಕ ನೆರವು ನೀಡಲಾಗಿದೆ. 
ರೈತರಿಗೆ 22.05 ಲಕ್ಷ ಕೋಟಿಯಷ್ಟು ಸಾಲ ನೀಡಲಾಗಿದೆ.
ಅಲ್ಪಸಂಖ್ಯಾತ ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ತ್ರಿವಳಿ ತಲಾಖ್‌ ಗೆ ತಿಲಾಂಜಲಿ ಬಿಡಲಾಗಿದೆ.
ಕಿಸಾನ್‌ ಸಮ್ಮಾನ್‌ ಯೋಜನೆಯಿಂದ ರೈತರು ಸಹಾಯಧನ ಪಡೆಯುತ್ತಿದ್ದು ಇದರಿಂದ ದೇಶದ ಆರ್ಥಿಕತೆಗೆ ಬಲ ಬಂದಿದೆ. 
ಪ್ರಧಾನ ಮಂತ್ರಿ ಯೋಜನೆಯ ಅಡಿಯಲ್ಲಿ ಉಚಿತ ಅಡುಗೆ ಅನಿಲ ನೀಡಲಾಗಿದೆ. 
ಪಿಎಂ ಆವಾಸ್‌ ಯೋಜನೆಯ ಅಡಿಯಲ್ಲಿ 3 ಕೋಟಿ ಮನೆಗಳನ್ನು ನಿರ್ಮಿಸಲಾಗಿದೆ. ಇನ್ನು ಮುಂದಿನ ಐದು ವರ್ಷಗಳಲ್ಲಿ ಈ ಸಂಖ್ಯೆ ದುಪ್ಪಟ್ಟಾಗಲಿದೆ. 
 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ