ಮೊದಲ ಮಹಿಳಾ ಸ್ಪೀಕರ್ ರಿತು ಖಂಡೂರಿ ಆಯ್ಕೆ
ರಿತು ಖಂಡೂರಿ ಅವರು 2017ರಲ್ಲಿ ಮೊದಲ ಬಾರಿಗೆ ಯಮಕೇಶ್ವರ ಕ್ಷೇತ್ರದಿಂದ ಆಯ್ಕೆ ಆಗಿದ್ದರು. ಈ ಹಿಂದೆ ರಿತು ಉತ್ತರಾಖಂಡ್ನ ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯಾಧ್ಯಕ್ಷರಾಗಿದ್ದರು.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕೋಟ್ದ್ವಾರ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ, ಕಾಂಗ್ರೆಸ್ನ ಸುರೇಂದ್ರ ಸಿಂಗ್ ನೇಗಿ ಅವರನ್ನು ಸೋಲಿಸಿದ್ದರು.
ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ರಿತು ಖಂಡೂರಿ ಅವರನ್ನು ಅಭಿನಂದಿಸಿ ಅವರ ನಾಯಕತ್ವದಲ್ಲಿ ರಾಜ್ಯ ವಿಧಾನಸಭೆಯು ಹೊಸ ಇತಿಹಾಸವನ್ನು ರಚಿಸಲಿದೆ ಎಂದು ತಿಳಿಸಿದರು.