ಈ ಆಶ್ರಮದ ಹುಡುಗಿಯರು ಪ್ರತಿನಿತ್ಯ 20 ಜನರ ಜೊತೆ ಸಂಬಂಧವಿಟ್ಟುಕೊಳ್ಳಬೇಕಂತೆ!
ಬುಧವಾರ, 12 ಡಿಸೆಂಬರ್ 2018 (07:28 IST)
ನವದೆಹಲಿ : ದೆಹಲಿಯ ವಸತಿ ನಿಲಯವೊಂದರಲ್ಲಿ ನಾಪತ್ತೆಯಾದ ಹೆಣ್ಣುಮಕ್ಕಳ ಪೈಕಿ ಒಬ್ಬಳನ್ನು ದೆಹಲಿ ಮಹಿಳಾ ಆಯೋಗ ರಕ್ಷಿಸಿದೆ. ಆದರೆ ಆಕೆ ಬಾಯ್ಬಿಟ್ಟ ನಾಪತ್ತೆಯ ಹಿಂದಿನ ರಹಸ್ಯ ಇದೀಗ ಹೊಸ ಸಂಚಲನವನ್ನು ಮೂಡಿಸಿದೆ.
ಹೌದು. ನವದೆಹಲಿಯ ದಿಲ್ಶದ್ ಗಾರ್ಡನ್ನಲ್ಲಿನ ಶಂಕರ್ ಆಶ್ರಮದಿಂದ ಡಿಸೆಂಬರ್ 1 ಹಾಗೂ 2 ರಂದು 9 ಹುಡುಗಿಯರು ನಾಪತ್ತೆಯಾಗಿದ್ದರು. ಆದರೆ ನಾಪತ್ತೆಯಾದವರಲ್ಲಿ 15 ವರ್ಷದ ಹುಡುಗಿ ಯೊಬ್ಬಳು ಮಹಿಳಾ ಆಯೋಗಕ್ಕೆ ಪತ್ರ ಬರೆದ ಹಿನ್ನಲೆಯಲ್ಲಿ ಇದೀಗ ಮಹಿಳಾ ಆಯೋಗ ಅಕೆಯನ್ನು ರಕ್ಷಿಸಿದೆ.
ಆದರೆ ಆ ಹುಡುಗಿ ನೀಡಿದ ದೂರಿನಲ್ಲಿ ಪ್ರತಿನಿತ್ಯ ನಾವು 20 ಜನರ ಜೊತೆ ಸಂಬಂಧವಿಟ್ಟಕೊಳ್ಳಬೇಕಾಗಿತ್ತು. ಅಲ್ಲದೇ ಆ ಹುಡುಗಿಯರನ್ನು ರಕ್ಷಿಸಲು ಮಹಿಳಾ ಆಯೋಗದ ತಂಡ ಕೋಟೆಗೆ ಬರುತ್ತಿದೆ. ಅವರೆಲ್ಲರನ್ನೂ ಮುಚ್ಚಿಡಿ ಎಂದು ಪೊಲೀಸನೊಬ್ಬ ಫೋನ್ ಮಾಡಿ ವಿಷಯ ಮುಟ್ಟಿಸಿದ್ದಾರೆ ಎಂದು ತಿಳಿಸಿದ್ದಾಳೆ.
ಬಾಲಕಿಯ ಈ ದೂರಿನ ಹೇಳಿಕೆ ಈಗ ಸಂಚಲನ ಸೃಷ್ಟಿಸಿದ್ದು, ಮಹಿಳಾ ಆಯೋಗ ಈ ವಿಚಾರವನ್ನು ಬಹಿರಂಗಪಡಿಸಿದೆ. ಈ ನಾಪತ್ತೆ ಪ್ರಕರಣದಲ್ಲಿ ಪೊಲೀಸರು ಶಾಮೀಲಾಗಿರುವುದು ಗೊತ್ತಾಗುತ್ತದೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಆರೋಪಿಸಿದ್ದಾರೆ. ಆದಕಾರಣ ಇದೀಗ ಕ್ರೈಂ ಬ್ರಾಂಚ್ ಪೊಲೀಸರು ಈ ಪ್ರಕರಣ ಕಾರ್ಯವನ್ನು ಚುರುಕುಗಳಿಸಿದ್ದು, ಶ್ರೀಘ್ರವೇ ಬಾಲಕಿಯರನ್ನ ಪತ್ತೆ ಹಚ್ಚುವುದಾಗಿ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.