‌20ಸಾವಿರ ಪ್ರಕರಣ ಹಿಂದಕ್ಕೆ– ಅಚ್ಚರಿಗೆ ಕಾರಣವಾದ ಉ.ಪ. ಸರ್ಕಾರ ತೀರ್ಮಾನ

ಶುಕ್ರವಾರ, 22 ಡಿಸೆಂಬರ್ 2017 (14:58 IST)
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನೇತೃತ್ವದ ಉತ್ತರಪ್ರದೇಶದ ಬಿಜೆಪಿ ಸರ್ಕಾರವು ರಾಜಕಾರಣಿಗಳ ಮೇಲಿನ 20 ಸಾವಿರಕ್ಕೂ ಅಧಿಕ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲು ತೀರ್ಮಾನಿಸಿದ್ದು ಅಚ್ಚರಿಗೆ ಕಾರಣವಾಗಿದೆ.
 
ರಾಜಕೀಯ ಮುಖಂಡರ ಮೇಲಿನ 20,000ಕ್ಕೂ ಹೆಚ್ಚು ಪ್ರಕರಣಗಳನ್ನು ಹಿಂದಕ್ಕೆ ಪಡೆಯುವ ಮಾಫಿ ಭಾಗ್ಯ ಕರುಣಿಸಲು ಮುಂದಾಗಿದೆ. ರಾಜ್ಯದಲ್ಲಿ ಸಚಿವರು, ಶಾಸಕರು ಮತ್ತು ನಾಯಕರ ಮೇಲೆ ದಾಖಲಾಗಿರುವ ರಾಜಕೀಯ ಪ್ರೇರಿತ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲು ಅನುವು ಮಾಡಿಕೊಡಲು ನಿರ್ಧರಿಸಲಾಗಿದೆ ಎಂದು ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ.
 
ರಾಜ್ಯದಾದ್ಯಂತ ದಾಖಲಾಗಿರುವ 20,000ಕ್ಕೂ ಹೆಚ್ಚು ಪ್ರಕರಣಗಳನ್ನು ರದ್ದುಗೊಳಿಸಲು ಕಾನೂನು ಜಾರಿಗೆ ತರಲಾಗುತ್ತಿದ್ದು. ಇದು ಎಲ್ಲ ರಾಜಕೀಯ ಪಕ್ಷಗಳಿಗೂ ಅನ್ವಯಿಸುತ್ತದೆ ಎಂದು ತಿಳಿಸಿದ್ದಾರೆ. 
 
ಅಪರಾಧ ಹಿನ್ನೆಲೆಯ ಹೊಂದಿರುವ ಹಾಗೂ ಶಿಕ್ಷೆಗೆ ಗುರಿಯಾಗಿರುವ ರಾಜಕಾರಣಿಗಳ ಪ್ರಕರಣಗಳನ್ನು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಆಸಕ್ತಿ ವಹಿಸಿದ್ದು ಹಾಗೂ ಚುನಾವಣಾ ಆಯೋಗ ಕಳಂಕಿತರು ಚುನಾವಣೆಯಲ್ಲಿ ಸ್ಪರ್ಧಿಸಲು ನಿಷೇಧ ಹೇರಲು ಸಿದ್ದತೆ ನಡೆಸಿರುವಾಗಲೇ ಯೋಗಿ ಸರ್ಕಾರದ ಈ ನಿರ್ಧಾರ ಕೈಗೊಂಡಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ