ಕುಡಿಯಲು ಹಣಕ್ಕಾಗಿ ಪತ್ನಿಯ ಮೇಲೆ ರೇಪ್ ಮಾಡಿಸಿದ ಪತಿ

ಮಂಗಳವಾರ, 26 ಮಾರ್ಚ್ 2019 (13:05 IST)
ಗುರುಗ್ರಾಮ : ಕುಡಿಯಲು ಹಣ ಸಂಗ್ರಹ ಮಾಡುವುದಕ್ಕಾಗಿ 31 ವರ್ಷದ ವ್ಯಕ್ತಿಯೊಬ್ಬ ಪತ್ನಿಯ ಮೇಲೆ ನೆರೆಮನೆಯವನಿಂದ ಹಾಗೂ ಸಂಬಂಧಿಕನಿಂದ ಅತ್ಯಾಚಾರ ಮಾಡಿಸಿದ ನೀಚ ಘಟನೆ  ಹರಿಯಾಣದಲ್ಲಿ ನಡೆದಿದೆ.


ಸಂತ್ರಸ್ತೆಗೆ  ಮೂವರು ಮಕ್ಕಳಿದ್ದಾರೆ. ಪತಿ ಆಗಾಗ ಕುಡಿದ ಮತ್ತಿನಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗುತ್ತಿದ್ದ, ಆದರೆ ಇದೀಗ ಕುಡಿಯಲು ಹಣಕ್ಕಾಗಿ ತನ್ನ ಪತ್ನಿಯನ್ನು ಮನೆಯಲ್ಲಿ ಬಂಧಿಸಿ ಬೇರೆಯವರಿಂದ ಅತ್ಯಾಚಾರ ಮಾಡಿಸಿದ್ದಾನೆ.


ಈ ಬಗ್ಗೆ ಮಹಿಳೆ ಬಿಚೋರ್ ಪೊಲೀಸ್ ಠಾಣೆಯಲ್ಲಿ ಪತಿಹಾಗೂ ಅತ್ಯಾಚಾರಿಗಳ  ವಿರುದ್ಧ ದೂರು ದಾಖಲಿಸಿದ್ದಾಳೆ.  ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಸಿಯ 376 ಡಿ (ಗ್ಯಾಂಗ್ ರೇಪ್), 120 ಬಿ (ಕ್ರಿಮಿನಲ್ ಪಿತೂರಿ) ಮತ್ತು 34 (ಸಾಮಾನ್ಯ ಉದ್ದೇಶ) ವಿಭಾಗಗಳ ಅಡಿಯಲ್ಲಿ ಮೂವರು ಆರೋಪಿಗಳ ವಿರುದ್ಧ ಎಫ್.ಐ.ಆರ್ ದಾಖಲಿಸಲಾಗಿದೆ. ಮಹಿಳೆಯ ಪತಿಯನ್ನು ಬಂಧಿಸಲಾಗಿದ್ದು ಮತ್ತಿಬ್ಬರು ತಲೆಮರೆಸಿಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ