ದಿನದಿಂದ ದಿನಕ್ಕೆ ಇಸ್ರೇಲ್‌ನ ರಣಾಕ್ರೋಶ ಹೆಚ್ಚಾಗುತ್ತಿದೆ. ತಮ್ಮನ್ನು ಗುರಿಯಾಗಿಸಿ ಹಮಾಸ್ ಉಗ್ರರು ನಡೆಸಿದ ದಾಳಿಗೆ ಇಸ್ರೇಲ್ ಕ್ಷಣ ಕ್ಷಣಕ್ಕೂ ತನ್ನ ಜಿದ್ದನ್ನು ಹೆಚ್ಚು ಮಾಡಿಕೊಳ್ಳುತ್ತಿದೆ. ಪ್ರತೀಕಾರದ ಮಾತನ್ನು ಆಡ್ತಿದೆ. ಹಮಾಸ್ ಉಗ್ರರನ್ನು ಸರ್ವನಾಶ ಮಾಡದೇ ಬಿಡಲ್ಲ, ಅನ್ನುವ ಪ್ರತಿಜ್ಞೆ ಮಾಡಿದೆ. ಈಗಾಗಲೇ ಇಡೀ ಗಾಜಾಪಟ್ಟಿ ಅಕ್ಷರಶಃ ಸ್ಮಶಾನ ಆಗಿದೆ. ಇಲ್ಲಿನ ಲಕ್ಷಾಂತರ ಜನರು ಇಸ್ರೇಲ್ ಕೊಟ್ಟ ಗಡುವಿನಿಂದ, ಎಚ್ಚೇತ್ತು ವಲಸೆ ಹೋಗಿದ್ದಾರೆ.
ಆದ್ರೆ ಮತ್ತೇ ಇಸ್ರೇಲ್ ಇನ್ನೂ ದೊಡ್ಡ ಮಟ್ಟದ ದಾಳಿಗೆ ಪ್ಲಾನ್ ಮಾಡಿಕೊಂಡಿದೆ. ಯುದ್ದವನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವ ಮಾತಿಲ್ಲ ಅಂತ ಘಂಟಘೋಷವಾಗಿ ಹೇಳಿ ಬಿಟ್ಟಿದೆ. ಅದರಲ್ಲೂ ಇಸ್ರೇಲ್‌ನ ಅಧ್ಯಕ್ಷ ನೆತನ್ಯಾಹು ವಿರಮಿಸುವ ಕ್ಷಣವೇ ಬರಲ್ಲ, ಅಂದುಕೊAಡ ಕೆಲಸ ಮಾಡುವವರೆಗೂ, ಹಿಂದೆ ಸರಿಯಲ್ಲ ಎಂದಿದ್ದಾರೆ.
ಸದ್ಯ ಈಗಾಗಲೇ ಗಾಜಾದ ಆರೋಗ್ಯ ಸಚಿವಾಲಯದಿಂದ ಮಾಹಿತಿಗಳ ಪ್ರಕಾರ ಈವರೆಗೂ ೪,೧೩೭ ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ರೆ, ೧೩,೦೦೦ ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇನ್ನೂ ಹಮಾಸ್ ಉಗ್ರರು ನೂರಾರು ಮಂದಿಯನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡಿದ್ದಾರೆ. ಹಾಗಾಗಿ ಇಸ್ರೇಲ್ ದಾಳಿಯನ್ನು ಇನ್ನಷ್ಟು ಬಿಗಿಗೊಳಿಸುವ ಸಾಧ್ಯತೆ ಹೆಚ್ಚಿದೆ.