ಹಮಾಸ್ ಉಗ್ರರಿಗೆ ಕಾಫಿ ಕೊಟ್ಟು ಯಾಮಾರಿಸಿದ ಇಸ್ರೇಲಿ ಮಹಿಳೆ!
ಇಸ್ರೇಲಿ ಮಹಿಳೆಯೊಬ್ಬರು ತಮ್ಮ ಮನೆಗೆ ನುಗ್ಗಿದ್ದ ಉಗ್ರರಿಗೆ ಕಾಫಿ, ಕುಕ್ಕೀಸ್ ನೀಡಿ ಯಾಮಾರಿಸಿ 20 ಗಂಟೆಗಳ ಕಾಲ ಮನೆಯೊಳಗೇ ಇರಿಸಿ ಪೊಲೀಸರಿಗೆ ಹಿಡಿದುಕೊಡಲು ಸಹಾಯ ಮಾಡಿದ ಘಟನೆ ಸುದ್ದಿಯಾಗುತ್ತಿದೆ.
ರಾಚೆಲ್ ಎಂಬ ಈ ಮಹಿಳೆಯನ್ನು ಉಗ್ರರು ಗ್ರೆನೇಡ್, ರೈಫಲ್ ತೋರಿಸಿ ಬೆದರಿಸಿದ್ದರು. ಆದರೆ ಮಹಿಳೆ ತನ್ನ ಬುದ್ಧಿವಂತಿಕೆಯಿಂದ ಉಗ್ರರನ್ನೇ ಯಾಮಾರಿಸಿದ್ದಾಳೆ. ಉಗ್ರರು ಹಸಿದಿದ್ದರೆ ಕೋಪಗೊಳ್ಳಬಹುದೆಂದು ತಾನೇ ಅಡುಗೆ ಮಾಡಿ ಕೊಟ್ಟಿದ್ದಳಂತೆ! ಆಕೆಯ ರೋಚಕ ಕತೆಗೆ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.