ಪ್ರೀತಿಸಿದವಳ ದೇಹವನ್ನು ಪೀಸ್, ಪೀಸ್ ಮಾಡ್ದ!

ಶುಕ್ರವಾರ, 19 ಆಗಸ್ಟ್ 2022 (13:28 IST)
ಮುಂಬೈ : ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯನ್ನು ಮದುವೆಯಾಗಲು ನಿರಾಕರಿಸಿದ 35 ವರ್ಷದ ಪತ್ರಕರ್ತ ಆಕೆಯ ಕತ್ತು ಹಿಸುಕಿ ಹತ್ಯೆಗೈದು,

ಸಾಕ್ಷ್ಯ ನಾಶಪಡಿಸಲು ಆಕೆಯ ದೇಹವನ್ನು ತುಂಡು, ತುಂಡುಗಳಾಗಿ ಕತ್ತರಿಸಿಹಾಕಿರುವ ಘಟನೆ ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿ ನಡೆದಿದೆ.

ಮೃತ 24 ವರ್ಷದ ಮಹಿಳೆ ಜಿಲ್ಲೆಯ ಶಿಯುರ್ ನಿವಾಸಿಯಾಗಿದ್ದು ಮೂರು ವರ್ಷದ ಮಗುವನ್ನು ಹೊಂದಿದ್ದಳು. ಆರೋಪಿ ಫ್ರೀಲಾನ್ಸ್ ರಿಪೋರ್ಟರ್ ಆಗಿ ಕೆಲಸ ಮಾಡುತ್ತಿದ್ದ ಸೌರಭ್ ಲಾಖೆ (35) ಎಂದು ಗುರುತಿಸಲಾಗಿದ್ದು, ಮಹಿಳೆಯೊಂದಿಗೆ ಈತ ಅನೈತಿಕ ಸಂಬಂಧ ಹೊಂದಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. 

ಇತ್ತೀಚೆಗಷ್ಟೇ ಕುಟುಂಬ ತೊರೆದು ಹುಡ್ಕೋ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ಮಹಿಳೆ ವಾಸಿಸುತ್ತಿದ್ದಳು. ಇಲ್ಲಿಗೆ ಸೌರಭ್ ಲಾಖೆ ಆಕೆಯನ್ನು ಭೇಟಿಯಾಗಲು ಬರುತ್ತಿದ್ದನು. ಮದುವೆಯಾಗುವಂತೆ ಮಹಿಳೆ ಒತ್ತಾಯಿಸುತ್ತಿದ್ದರಿಂದ ಬೇಸತ್ತ ಆರೋಪಿ ಆಗಸ್ಟ್ 15 ರಂದು ಆಕೆಯ ಕತ್ತು ಹಿಸುಕಿ ಕೊಂದು ನಂತರ ಆಕೆಯ ದೇಹವನ್ನು ತುಂಡುಗಳಾಗಿ ಕತ್ತರಿಸಿದ್ದಾನೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ