ಇನ್ನೂ ಉದ್ಯಮಿಗೆ ಇತ್ತೀಚೆಗೆ ಪರಿಚಯ ಅಗಿದ್ದ ಇಬ್ಬರು ಯುವತಿಯರ ಹೆಸರು ಬಳಸಿ ಚಾಟ್ ಮಾಡಿದಾನೆ . ನಂತರ ಉದ್ಯಮಿಯನ್ನ ಭೇಟಿಯಾಗಿ ತಾವು ಕ್ರೈಮ್ ಪೊಲೀಸರು ಎಂದು ಹೇಳಿ ಹೆದರಿಸಿದ್ದಾನೆ.ಯುವತಿಯರ ಜೊತೆಗೆ ಅಶ್ಲೀಲ ಚಾಟ್ ತೋರಿಸಿ ನಿಮ್ಮ ಮೇಲೆ ಕೇಸ್ ದಾಖಲಾಗಿದೆ ಎಂದು ಹೇಳಿದ್ದಾನೆ.ನಂತರ ಕೇಸ್ ಮುಂದುವರೆಸದಿರಲು ಹಣ ಕೇಳಿದ್ದಾನೆ.ಮೊದಲಿಗೆ ಐವತ್ತು ಸಾವಿರ ಕೇಳಿದ್ದಾನೆ. ನಂತರ ಬ್ಯಾಂಕ್ ನಲ್ಲಿ ಮೂರು ಲಕ್ಷ ಡ್ರಾ ಮಾಡಿಸಿಕೊಂಡಿದ್ದಾನೆ .ಹಂತ ಹಂತ ವಾಗಿ ಒಟ್ಟು ಹದಿನಾಲ್ಕು ಲಕ್ಷ ಕ್ಕೂ ಹೆಚ್ಚಿನ ಹಣ ವಸೂಲಿ ಮಾಡಿದ್ದಾನೆ.ಹಲಸೂರು ಗೇಟ್ ಬಳಿ ಸಹ ಒಮ್ಮೆ ಹಣ ಪಡೆದಿದ್ದಾನೆ.