ಪಬ್ ಜಿ ಆಟದ ಹುಚ್ಚುಗೆ ಪತ್ನಿಯ ತಮ್ಮನಿಗೆ ಚಾಕುವಿನಿಂದ ಇರಿದ ವ್ಯಕ್ತಿ

ಸೋಮವಾರ, 18 ಫೆಬ್ರವರಿ 2019 (06:48 IST)
ಥಾಣೆ : ಇತ್ತಿಚೆಗೆ ಜನರಿಗೆ ಪಬ್ ಜಿ ಆಟದ ಹುಚ್ಚು ಹೆಚ್ಚಾಗಿದ್ದು, ಇದೀಗ ಪಬ್ ಜಿ ಆಟದ ಚಟಕ್ಕೆ ಬಿದ್ದ ವ್ಯಕ್ತಿಯೊಬ್ಬ ಪತ್ನಿಯ ತಮ್ಮನಿಗೆ ಚಾಕುವಿನಿಂದ ಇರಿದ ಘಟನೆ ಥಾಣೆಯಲ್ಲಿ ನಡೆದಿದೆ.


ರಜನೀಶ್ ರಾಜ್ಭರ್ ಎಂಬಾತ ಪಬ್ ಜಿ ಆಟವನ್ನು ಆಡುತ್ತಿದ್ದಾಗ ಮೊಬೈಲ್ ಬ್ಯಾಟರಿ ಮುಕ್ತಾಯವಾಗಿತ್ತು. ಈ ಸಮಯದಲ್ಲಿ ಚಾರ್ಜರ್ ನೀಡುವಂತೆ ಭಾವಿ ಪತ್ನಿಯ ತಮ್ಮ ಓಂ ಭವದಂಕರ್‌ನನ್ನು ಕೇಳಿದ್ದಾನೆ.


ಆ ವೇಳೆ ಆತ ಚಾರ್ಜರ್ ನೀಡಲು ನಿರಾಕರಿಸದ್ದಕ್ಕೆ ಇಬ್ಬರ ನಡುವೆ ಜಗಳ ನಡೆದು ರಜನೀಶ್ ತನ್ನ ಪತ್ನಿಯ ತಮ್ಮನಿಗೆ ಚಾಕುವಿನಿಂದ ಇರಿದಿದ್ದಾನೆ. ಈ ‍ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


                                                                                                     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ