ಉದ್ಯೋಗಿಯ ಗುಪ್ತಾಂಗಕ್ಕೆ ಸ್ಯಾನಿಟೈಸರ್ ಹಾಕಿದ ಮ್ಯಾನೇಜರ್

ಸೋಮವಾರ, 6 ಜುಲೈ 2020 (10:29 IST)
Normal 0 false false false EN-US X-NONE X-NONE

ಪುಣೆ : ಲಾಕ್ ಡೌನ್ ವೇಳೆ ಕಂಪೆನಿಯ ಹಣ ಬಳಕೆ ಮಾಡಿಕೊಂಡಿದ್ದಕ್ಕೆ ಕಂಪೆನಿಯ ಮ್ಯಾನೇಜರ್ ಉದ್ಯೋಗಿಯ ಗುಪ್ತಾಂಗಕ್ಕೆ ಸ್ಯಾನಿಟೈಸರ್ ಹಾಕಿದ ಘಟನೆ ಪುಣೆಯಲ್ಲಿ ನಡೆದಿದೆ.
 

ಕೊರೊನಾ ನಿಯಂತ್ರಿಸಲು ಸರ್ಕಾರ ಲಾಕ್ ಡೌನ್ ಮಾಡಿತ್ತು. ಆ ವೇಳೆ ಕೆಲಸಕ್ಕೆಂದು ದೆಹಲಿಗೆ ತೆರಳಿದ್ದ ಉದ್ಯೋಗಿ ಅಲ್ಲಿಯೇ ಉಳಿಯಬಾಕಾಗಿತ್ತು. ಆ ವೇಳೆ ಆತ ಕಂಪೆನಿಯ ಹಣ ಬಳಕೆ ಮಾಡಿಕೊಂಡಿದ್ದಾನೆ. ಇದರಿಂದ ಕೋಪಗೊಂಡ ಮ್ಯಾನೇಜರ್ ಆತನನ್ನು ಕಿಡ್ನಾಪ್ ಮಾಡಿ ಆತನನ್ನು ಹಗ್ಗದಿಂದ ಕಟ್ಟಿ ಹಾಕಿ ಗುಪ್ತಾಂಗಕ್ಕೆ ಸ್ಯಾನಿಟೈಸರ್ ಹಾಕಿದ್ದಾನೆ.

ಈ ಬಗ್ಗೆ ಉದ್ಯೋಗಿ ಮ್ಯಾನೇಜರ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ