ಮಗು ಮಾರಾಟ ಮಾಡಲು ಪೋಷಕರಿಗೆ ಪ್ರೇರೇಪಿಸಿದ ಆಸ್ಪತ್ರೆಗೆ ಬೀಗ

ಶುಕ್ರವಾರ, 4 ಸೆಪ್ಟಂಬರ್ 2020 (10:40 IST)
ನವದೆಹಲಿ: ಹೆರಿಗೆ ಬಳಿಕ ಆಸ್ಪತ್ರೆ ಬಿಲ್ ಕಟ್ಟಲು ಸಾಧ್ಯವಾಗದೇ ಪೋಷಕರು ನವಜಾತ ಶಿಶುವನ್ನೇ ಆಸ್ಪತ್ರೆಗೆ ಮಾರಿದ ಘಟನೆ ಬಗ್ಗೆ ಓದಿರುತ್ತೀರಿ. ಇದೀಗ ಆ ಆಸ್ಪತ್ರೆ ವಿರುದ್ಧ ದೂರು ದಾಖಲಾಗಿದ್ದು, ಬೀಗ ಜಡಿಯಲಾಗಿದೆ.


ಆಗ್ರಾದಲ್ಲಿ ಈ ಘಟನೆ ನಡೆದಿತ್ತು. ಬಿಲ್ ಕಟ್ಟಲಾಗದ ಬಡ ದಂಪತಿ ನವಜಾತ ಗಂಡು ಮಗುವನ್ನು 1 ಲಕ್ಷ ರೂ.ಗಳಿಗೆ ಮಾರಿದ್ದರು. ಆದರೆ ದಂಪತಿ ಮಾರಿದ್ದಲ್ಲ, ತಮಗೆ ಮಗುವನ್ನು ದತ್ತು ನೀಡಿರುವುದು ಎಂದು ಆಸ್ಪತ್ರೆಯವರು ಸಮಜಾಯಿಷಿ ನೀಡಿದ್ದರು. ಆದರೆ ಈ ಬಗ್ಗೆ ದೂರು ದಾಖಲಿಸಿಕೊಂಡ ಮಕ್ಕಳ ಹಕ್ಕುಗಳ ರಾಷ್ಟ್ರೀಯ ಆಯೋಗ ಆಸ್ಪತ್ರೆಗೆ ದಾಳಿ ನಡೆಸಿ ಬೀಗ ಜಡಿಸಿದೆ. ಇದೀಗ ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ