ಪ್ರೇಯಸಿಯ ಭೇಟಿಗೆ ಹೋಗಿದ್ದ ಯುವಕ ಹೆಣವಾಗಿ ಪತ್ತೆಯಾದ!
ಆತನ ಕಾಲು ಮತ್ತು ಕೈ ತುಂಡಾದ ಸ್ಥಿತಿಯಲ್ಲಿದೆ. ವಿದ್ಯಾರ್ಥಿಯಾಗಿರುವ ಯುವಕ ಮುಸ್ಲಿಂ ಧರ್ಮದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಇವರಿಬ್ಬರ ಸಂಬಂಧಕ್ಕೆ ಯುವತಿ ಮನೆಯವರ ವಿರೋಧವಿತ್ತು ಎಂದು ಪೊಲೀಸರ ತನಿಖೆಯಿಂದ ಬಯಲಾಗಿದೆ.
ಹೀಗಾಗಿ ಈ ಸಾವು ಕೊಲೆಯಾಗಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಯುವಕನ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಆ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.